ಬೆಂಗಳೂರು,ಜನವರಿ,5,2021(www.justkannada.in): ಹಲವು ಶಿಕ್ಷಕರಿಗೆ ಕೊರೋನಾ ಸೋಂಕು ಹಿನ್ನೆಲೆ, ಶಾಲೆಗಳಲ್ಲಿ ಭಯಪಡುವಷ್ಟು ಶಿಕ್ಷಕರಿಗೆ ಕೊರೋನಾ ಬಂದಿಲ್ಲ. ಪೋಷಕರು, ವಿದ್ಯಾರ್ಥಿಗಳಲ್ಲಿ ಆತಂಕ ಬೇಡ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಸುಧಾಕರ್, ಭಯಪಡುವಷ್ಟು ಕೊರೋನಾ ಕೇಸ್ ಬಂದಿಲ್ಲ. ಶಾಲೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಹೀಗಾಗಿ ಪೋಷಕರು, ವಿದ್ಯಾರ್ಥಿಗಳಲ್ಲಿ ಕೊರೋನಾ ಆತಂಕ ಬೇಡ ಎಂದರು.
ಇನ್ನು ಬ್ರಿಟನ್ ನಿಂದ ಬಂದವರು ನಾಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, 75 ಮಂದಿ ಮಾತ್ರ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಈ ಬಗ್ಗೆ ಬಿಬಿಎಂಪಿ ಆಯುಕ್ತರ ಜತೆ ಮಾತನಾಡುತ್ತೇನೆ. ಅವರು ಸಂಪರ್ಕಿತರನ್ನು ಸೇರಿಸಿ ಹೇಳ್ತಿದ್ದಾರೆಯೇ ಎಂಬುದು ಗೊತ್ತಿಲ್ಲ. ಈ ಬಗ್ಗೆ ಚರ್ಚಿಸುತ್ತೇನೆ ಎಂದರು.
ENGLISH SUMMARY….
Corona has not spread among teachers as much as parents are fearing: No need to panic, Minister Sudhakar
Bengaluru, Jan. 05, 2021 (www.justkannada.in): “There might be a few cases of corona pandemic among the teachers. But it has not spread as much as parents and students are fearing and there is no need to panic,” said Health and Medical Education Minister Dr. K. Sudhakar.
Speaking in Bengaluru today, he said not many cases are reported, and all precautionary measures have been taken in the schools. Therefore there is no need for the parents or the students to panic.
“The Britain Coronavirus variant is found in 75 people, and I have already spoken with the BBMP Commissioner regarding this. I also don’t know whether this number includes primary and secondary contact people also or not. I will discuss and let you know,” he explained.
Keywords: Coronavirus/ no need to panic/ parents/ students/ Dr. K. Sudhakar
Key words: Corona- not had -teachers -fear – schools-Don’t worry-Minister -Sudhakar.