ಮೈಸೂರು,ಮೇ,17,2021(www.justkannada.in): ಮೈಸೂರಿನಲ್ಲಿ ಆಕ್ಸಿಜನ್ ಸಿಗದೆ ಸಾಕಷ್ಟು ಜನ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಯಾರಿಗೆ ಆಕ್ಸಿಜನ್ ಅವಶ್ಯಕತೆ ಇರುತ್ತದೆಯೋ ಅವರು ನಮಗೆ ಕರೆ ಮಾಡಿದರೂ ಅವರ ಮನೆ ಬಾಗಿಲಿಗೆ ಹೋಗಿ ಆಕ್ಸಿಜನ್ ತಲುಪಿಸಲಾಗುತ್ತದೆ ಎಂದು ಯಶ್ ಟೆಲ್ ವಾಹಿನಿ ಮುಖ್ಯಸ್ಥ ಮಂಜುನಾಥ್ ತಿಳಿಸಿದರು.
ಹೋಂ ಐಸೋಲೇಷನ್ ನಲ್ಲಿರುವ ಕೊರೊನಾ ಸೋಂಕಿತರಿಗೆ ಉಚಿತ ಆಕ್ಸಿಜನ್ ಕಾನ್ಸನ್ ಟ್ರೇಟರ್ ಸೌಲಭ್ಯ ಒದಗಿಸಲು ಯು ಡಿಜಿಟಲ್ ಮತ್ತು ಯಶ್ ಟೆಲ್ ಮುಂದಾಗಿದ್ದು, ಶಾಸಕ ಎಲ್.ನಾಗೇಂದ್ರ ಹಾಗೂ ಡಿಸಿಪಿ ಪ್ರಕಾಶ್ ಗೌಡ ಈ ಸೇವಾ ಸೌಲಭ್ಯಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಯಶ್ ಟೆಲ್ ವಾಹಿನಿ ಮುಖ್ಯಸ್ಥ ಮಂಜುನಾಥ್, ಮೈಸೂರಿನಲ್ಲಿ ಆಕ್ಸಿಜನ್ ಸಿಗದೆ ಸಾಕಷ್ಟು ಜನ ತೊಂದರೆಗೀಡಾಗಿದ್ದು, ಆಸ್ಪತ್ರೆ ಅಲೆದರೂ ಸಹ ಅವರಿಗೆ ಆಕ್ಸಿಜನ್ ಸಿಗುತ್ತಿಲ್ಲ. ಅದ್ದರಿಂದ ಸದ್ಯ 10 ಕೆಜೆ ಪ್ರೆಶರ್ ಹಾಗೂ 5 ಕೆಜಿ ಪ್ರೆಶರ್ ಆಕ್ಸಿಜನ್ ಕಾನ್ಸನ್ ಟ್ರೇಟರ್ ತರಿಸಲಾಗಿದ್ದು, ಇದನ್ನು ಯಾರಿಗೆ ಅವಶ್ಯಕತೆ ಇರುತ್ತದೆಯೋ ಅವರಿಗೆ ನೀಡಲಾಗುತ್ತದೆ. ಮೈಸೂರಿನ ಯಾವುದೇ ಮೂಲೆಯಿಂದಲ್ಲಾದರೂ ಸರಿ ನಮಗೆ ಕರೆ ಮಾಡಿದರೆ ಮನೆಗೆ ಬಾಗಿಲಿಗೆ ಹೋಗಿ ಕೊಡಲಾಗುತ್ತದೆ ಎಂದು ತಿಳಿಸಿದರು.
ಆಸ್ಪತ್ರೆಗೆ ಸ್ಥಳಾಂತರವಾಗುವವರೆಗೆ ಯಂತ್ರವನ್ನು ಇಟ್ಟಿಕೊಳ್ಳಬಹುದು. ಇದಕ್ಕಾಗಿ ಒಂದು ತಂಡ ರಚನೆ ಮಾಡಲಾಗಿದ್ದು, ಅದರಲ್ಲಿ 12 ಮಂದಿ ಇದ್ದಾರೆ. ಈ ಜೊತೆಗೆ 2 ವ್ಯಾನ್ ಇದ್ದು, ನಮ್ಮ ಹುಡುಗರೇ ಮನೆಗೆ ಹೋಗಿ ಯಂತ್ರ ಅಳವಡಿಸಿ ಬರುತ್ತಾರೆ. ಹಾಗೆಯೇ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಡಿಮೋ ನೀಡಿ ಬರುತ್ತಾರೆ ಎಂದು ಯಶ್ ಟೆಲ್ ವಾಹಿನಿ ಮುಖ್ಯಸ್ಥ ಮಂಜುನಾಥ್ ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶಾಸಕ ಎಲ್. ನಾಗೇಂದ್ರ, ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಆತಂಕಕ್ಕೊಳಗಾಗುವ ಜನಸಾಮಾನ್ಯರಿಗೆ ಇಂತಹ ಸಂಸ್ಥೆಗಳು ಈ ಮೂಲಕ ಧೈರ್ಯ ತುಂಬುವ ಕೆಲಸ ಮಾಡುತ್ತಿವೆ. ಆಕ್ಸಿಜನ್ ಅವಶ್ಯಕತೆ ಇರುವವರಿಗೆ ಆಸ್ಪತ್ರೆಗೆ ಹೋಗುವವರೆಗೆ ಇದು ನೆರವಾಗಲಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಶಾಂತವೇರಿ ಗೋಪಲಗೌಡ ಆಸ್ಪತ್ರೆಯ ಡಾ.ಸಂತೃಪ್ತ್, ಈ ಆಕ್ಸಿಜನ್ ಕಾನ್ಸನ್ ಟ್ರೇಟರ್ ನಿಂದ ಎರಡು ಉಪಯೋಗವಿದೆ. ಒಂದು ಆಕ್ಸಿಜನ್ ಸಿಲಿಂಡರ್ ಇಂದು ಬಾಡಿಗೆಗೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಸೋಂಕಿತರಿಗೆ ಎರಡು, ಮೂರು ಲೀಟರ್ ಆಕ್ಸಿಜನ್ ಬೇಕಾಗಿರುತ್ತದೆ. ಅವರಿಗೆಲ್ಲಾ ಆಸ್ಪತ್ರೆ ಯಲ್ಲೇ ಇರುತ್ತಾರೆ. ಇವರಿಗೆ ಕಾನ್ಸನ್ ಟ್ರೇಟರ್ ಸಿಕ್ಕರೆ ಮನೆಯಲ್ಲೇ ಆಕ್ಸಿಜನ್ ಪಡೆಯಬಹುದು. ಜೊತೆಗೆ ಹೆಚ್ಚು ಆಕ್ಸಿಜನ್ ಬೇಕಾಗಿರುವವರಿಗೆ ಆಸ್ಪತ್ರೆಯಲ್ಲಿ ಬೆಡ್ ಸೌಲಭ್ಯವೂ ಸಿಗುತ್ತದೆ ಎಂದು ಹೇಳಿದರು.
Key words: corona-Oxygen –call- Yashtel-Channel -President –Manju