ಬೆಂಗಳೂರು ,ಏಪ್ರಿಲ್,16,2021(www.justkannada.in): ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇದೀಗ ಕೊರೋನಾ ಸೋಂಕು ದೃಢವಾಗಿದೆ.
ಅನಾರೋಗ್ಯ ಹಿನ್ನೆಲೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆಯಷ್ಟೇ ಕೊರೊನಾ ಟೆಸ್ಟ್ʼಗೆ ಒಳಪಡಿಸಲಾಗಿದ್ದ ಸಿಎಂ ಪರೀಕ್ಷಾ ವರದಿ ನೆಗೆಟಿವ್ ಬಂದಿತ್ತು. ಆದರೂ ಲಕ್ಷಣಗಳಿರುವ ಕಾರಣ ಇಂದು ಮತ್ತೊಮ್ಮೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಸಧ್ಯ ಪರೀಕ್ಷಾ ವರದಿ ಬಂದಿದ್ದು, 2ನೇ ಬಾರಿಯ ಕೋವಿಡ್ ಟೆಸ್ಟ್ʼನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪಗೆ ಕೊರೊನಾ ಸೋಂಕು ಧೃಢಪಟ್ಟಿದೆ.
ನಿನ್ನೆ ಮೊನ್ನೆ ಸಿಎಂ ಬಿಎಸ್ ಯಡಿಯೂರಪ್ಪ ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದರು. ಇಂದು ಬೆಳಿಗ್ಗೆ ಕೋವಿಡ್ ಸಂಬಂಧ ಅಧಿಕಾರಿಗಳ ಜತೆ ಸಭೆ ನಡೆಸಿದ್ದರು. ಇನ್ನು ಕೊರೊನಾ ಸೋಂಕಿಗೆ ತುತ್ತಾಗಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಎಂ.ಎಸ್ ರಾಮಯ್ಯ ಆಸ್ಪತ್ರೆಯಿಂದ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸಿಎಂ ಬಿಎಸ್ ವೈ ಇತ್ತೀಚೆಗೆ ಕೊರೋನಾ ಲಸಿಕೆ ಮೊದಲ ಡೋಸ್ ಪಡೆದಿದ್ದರು.
ENGLISH SUMMARY….
CM BSY tests Corona positive
Bengaluru, Apr. 16, 2021 (www.justkannada.in): Chief Minister B.S. Yedyurappa who was suffering from fever for the last two days has tested positive for COVID-19.
The Chief Minister was admitted to the M.S. Ramaiah Hospital following ill-health yesterday. However, his corona reports tested negative. Following symptoms, another test was conducted in which he tested positive.
CM Yedyurappa was engaged in the byelection campaigning for the last two days. He had also conducted a meeting with several government officials on the COVID-19 situation. He has been shifted to the Manipal Hospital. He had also received the first dose of the corona vaccine recently.
Keywords: CM B.S. Yedyurappa/ COVID-19 positive/ M.S. Ramaiah Hospital/ Manipal Hospital/ byelection campaign
Key words: Corona positive – CM BS Yeddyurappa- Hospitalization