ಮೈಸೂರು,ಜೂ,19,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.
ಈ ನಡುವೆ ಇಂದು ಮೈಸೂರಿನಲ್ಲಿ ನಾಲ್ವರಿಗೆ ಕೊರೋನಾ ಪಾಸಿಟಿವ್ ಬರುವ ಸಾಧ್ಯತೆ ಇದೆ. ಕೊರೊನಾ ಸೋಂಕಿತರು ಇದ್ದ ಮನೆಗೆ ಹೋಗಿದ್ದಕ್ಕೆ ಕೊರೊನಾ ಸೋಂಕು ಹರಡಿದೆ ಎನ್ನಲಾಗಿದೆ. ಮೈಸೂರಿನ ಇಟ್ಟಿಗೆಗೂಡಿನಲ್ಲಿ ಅಜ್ಜಿ ಮೊಮ್ಮಗ ಕೊರೋನಾ ಸೊಂಕು ಧೃಡವಾಗುವ ಸಾಧ್ಯತೆ ಇದೆ.
ಅಜ್ಜಿ ಮೊಮ್ಮಗ ಕೊರೋನಾ ಸೊಂಕು ಧೃಢವಾಗುವುದು ಸಾಧ್ಯತೆ ಇದೆ. ಇನ್ನು ತಮಿಳುನಾಡಿನ ವೃದ್ದ ದಂಪತಿಗೆ ಸೋಂಕು ತಗುಲಿತ್ತು. ಅವರು ವಾಸವಿದ್ದ ಮನೆಗೆ ಹೋಗಿದ್ದ ಅಜ್ಜಿ ಮೊಮ್ಮಗನಿಗೂ ಸೋಂಕು ಹರಡಿತ್ತು ಎನ್ನಲಾಗಿದೆ. ಅದೇ ಮನೆಯಲ್ಲಿದ್ದ ಅಜ್ಜಿಯ ಮಗ ಸೊಸೆಗೂ ಮಹಾಮಾರಿ ವಕ್ಕರಿಸಿದೆ.
ಖಾಸಗಿ ಆಸ್ಪತ್ರೆಯಲ್ಲಿದ್ಧ ಅಜ್ಜಿಯನ್ನು ನೋಡಲು ತಮಿಳುನಾಡಿನಿಂದ ವೃದ್ದ ದಂಪತಿ ಬಂದಿದ್ದರು. ವೃದ್ದ ದಂಪತಿಗೆ ಕೊರೊನಾ ಸೋಂಕು ತಗುಲಿತ್ತು. ಅವರು ಉಳಿದುಕೊಂಡಿದ್ದ ಮನೆಯಲ್ಲಿದ್ದ ಇಬ್ಬರಿಗೂ ಸೋಂಕು ಸೋಂಕು ತಗುಲಿರುವ ಸಾಧ್ಯತೆ ಇದೆ.
ಈ ಮಧ್ಯೆ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದ ಅಜ್ಜಿ ಮೊಮ್ಮಗನಲ್ಲೂ ಸೋಂಕು ಸಾಧ್ಯತೆ ಕಂಡು ಬಂದಿದೆ. ಆಸ್ಪತ್ರೆಗೆ ದಾಖಲಾಗಿದ್ದ ಅಜ್ಜಿ ಮೊಮ್ಮಗ ಆಸ್ಪತ್ರೆಯಿಂದ ಮನೆಗೆ ಹೋಗುವುದಿಲ್ಲ ಎಂದಿದ್ದರು. ಆದರೂ ಅವರನ್ನು ಮನೆಗೆ ಕಳುಹಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಮನೆಗೆ ಕಳುಹಿಸಿದ ನಂತರ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆ ತಡರಾತ್ರಿ ಅಜ್ಜಿ ಮೊಮ್ಮಗನನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಅಜ್ಜಿ ಮೊಮ್ಮಗ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನವೇ ಮತ್ತೆ ಸೊಂಕು ತಗುಲಿದೆ. ಅವರ ಮನೆಯ ಮತ್ತೆ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
Key words: Corona -positive -four – Mysore