ಮೈಸೂರು,ಜು,1,2020(www.justkannada.in): ಜಿಲ್ಲೆಯ ಕೆ.ಆರ್ ನಗರ ತಾಲ್ಲೂಕಿನ ಸಾಲಿಗ್ರಾಮದಲ್ಲಿ ವ್ಯಕ್ತಿಯೊಬ್ಬನಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಗ್ರಾಮದ ಕೋಟೆ ಬೀದಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಸುಮಾರು 39 ವರ್ಷದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಕೆಲ ದಿನಗಳ ಹಿಂದಷ್ಟೇ ಈ ವ್ಯಕ್ತಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾಲಿಗ್ರಾಮದ ಆಸ್ವತ್ರೆಯಲ್ಲಿ ಈ ಸಂಬಂಧ ಪರೀಕ್ಷೆ ನಡೆಸಲಾಗಿತ್ತು. ಇಂದು ಇದರ ವರದಿ ಬಂದಿದ್ದು, ವ್ಯಕ್ತಿಗೆ ಕೊರೋನಾ ಸೋಂಕು ದೃಢವಾಗಿದೆ. ಸೋಂಕಿತ ವ್ಯಕ್ತಿಯನ್ನ ಮೈಸೂರಿನ ಕೋವಿಡ್ ಆಸ್ವತ್ರೆಗೆ ದಾಖಲಿಸಲಾಗಿದೆ.
ಮುನ್ನಚ್ಚರಿಕೆಯ ಕ್ರಮವಾಗಿ ಕೆ.ಆರ್.ನಗರ ವೃತ್ತ ನಿರೀಕ್ಷ ರಾಜು. ಆರೋಗ್ಯಧಿಕಾರಿ ಮಹೇಂದ್ರಪ್ಪ. ಆರೋಗ್ಯ ನಿರೀಕ್ಷಕ ರಮೇಶ್. ವೈದ್ಯಾಧಿಕಾರಿ ಮಂಜುನಾಥ್, ಸಾಲಿಗ್ರಾಮ ಪಿಎಸ್ ಐ ಆರತಿ ಮತ್ತಿತರು ಸೋಂಕಿತ ವ್ಯಕ್ತಿ ವಾಸವಿದ್ದ ಕೋಟೆ ಬೀದಿಯನ್ನು ಸೀಲ್ಡ್ ಡೌನ್ ಮಾಡಿದ್ದಾರೆ.
ಕೋರೋನ ಪಾಸಿಟಿವ್ ಬಂದ ವ್ಯಕ್ತಿ ಸಾಲಿಗ್ರಾಮದಲ್ಲಿ ಪ್ರಕಾಶ್ ಸ್ಟೋರ್ ಚಿಲ್ಲರೆ ಅಂಗಡಿ ವ್ಯಾಪಾರ ನಡೆಸುತ್ತಿದ್ದು ಈತನ ಸಂಪರ್ಕದಲ್ಲಿ ಇದ್ದವರ ಮಾಹಿತಿಯನ್ನ ಪಡೆಯಲಾಗುತ್ತಿದೆ. ನಗರ ತಾಲ್ಲೂಕಿನಲ್ಲಿ ಇದುವರೆಗೂ 5 ಕೊರೋನಾ ಪ್ರಕರಣಗಳು ಕಂಡು ಬಂದಿದ್ದು ಒಂದು ಸಾವು ಸಂಭವಿಸಿದೆ. ಕೊರೋನಾ ಪ್ರಕರಣಗಳ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತಾಲ್ಲೂಕಿನಲ್ಲಿ ಬೆಳಿಗ್ಗೆ 7ರಿಂದ ಮಧ್ಯಾಹ್ನ 2ರವರಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಬೆಳಿಗ್ಗೆಯಿಂದ ಸಂಜೆ ತನಕ ಸರ್ಕಾರಿ ಕಚೇರಿ ಕೆಲಸ ನಿರ್ವಹಿಸಲಿವೆ. ರಾತ್ರಿ 8 ಗಂಟೆಯ ನಂತರ ಬೆಳಿಗ್ಗೆ ತನಕ ಕರ್ಪೂ ಇರಲಿದ್ದು ಈ ಸಮಯದಲ್ಲಿ ಅನಗತ್ಯ ಸಂಚಾರ ನಡೆಸಿದರೆ, ಮನೆಯಿಂದ ಹೊರ ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನಿಡೀದ್ದಾರೆ.
Key words: Corona Positive -KR nagar –taluk- saligrama-Seal Down.