ಮೈಸೂರು,ಜೂ,3,2020(www.justkannada.in): ಮೈಸೂರು ನಗರದಲ್ಲಿ ರಣಕೇಕೆ ಹಾಕಿದ್ದ ಕೊರೋನಾ ವೈರಸ್ ಭೀತಿ ಇದೀಗ ಜಿಲ್ಲೆಯ ಗ್ರಾಮೀಣ ಭಾಗಕ್ಕೂ ಎಂಟ್ರಿ ಕೊಟ್ಟಿದೆ.
ಮೈಸೂರು ನಗರ ಆಯ್ತು ಈಗ ಗ್ರಾಮೀಣ ಪ್ರದೇಶದಲ್ಲೂ ಮುಂಬೈ ಕೊರೋನಾ ಭೀತಿ ಎದುರಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಪೆಂಜಳ್ಳಿ ಗ್ರಾಮದ ಗರ್ಭಿಣಿಗೂ ಕರೋನಾ ಪಾಸಿಟಿವ್ ಕಂಡು ಬಂದಿದ್ದು ಈ ಹಿನ್ನೆಲೆ ಪೆಂಜಳ್ಳಿ ಗ್ರಾಮವನ್ನ ಸೀಲ್ ಡೌನ್ ಮಾಡಲಾಗಿದೆ.
29 ವರ್ಷದ ಗೃಹಿಣಿಗೆ ಕೊರೋನಾ ಪಾಸಿಟಿವ್ ಶಂಕೆ ಹಿನ್ನೆಲೆ ಆರೋಗ್ಯ ಇಲಾಖೆ ಸಿಬ್ಬಂದಿ ಮಹಿಳೆಯನ್ನು ಮೈಸೂರಿನ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಗರ್ಭಣಿ ಮಹಿಳೆ ಮುಂಬೈನಿಂದ ನಿನ್ನೆಷ್ಟೇ ಗ್ರಾಮಕ್ಕೆ ಆಗಮಿಸಿದ್ದರು. ವಿಚಾರ ತಿಳಿದು ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಮಹಿಳೆಯನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಮಹಿಳೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಎಲ್ಲರಿಗೂ ಪರೀಕ್ಷೆ ಮಾಡಲಾಗಿದ್ದು ಪೆಂಜಳ್ಳಿ ಗ್ರಾಮ ಸೀಲ್ ಡೌನ್ ಮಾಡಿ ಹೊರಗಿನವರ ಪ್ರವೇಶಕ್ಕೆ ತಾಲ್ಲೂಕು ಆಡಳಿತ ನಿರ್ಬಂಧ ಹೇರಿದೆ.
29 ವರ್ಷದ ಗೃಹಿಣಿ ಕೆ.ಆರ್.ನಗರ ತಾಲೂಕಿನ ಹೆಬ್ಬಳ್ಳ ಗ್ರಾಮಕ್ಕೆ ವಿವಾಹವಾಗಿದ್ದರು. ಇನ್ನು ಅಧಿಕಾರಿಗಳು ಮಹಿಳೆಯ ಟ್ರಾವಲ್ ಹಿಸ್ಟರಿ ಕಲೆಹಾಕುತ್ತಿದ್ದಾರೆ. ಗ್ರಾಮದಲ್ಲಿ ಸುಮಾರು 400 ಕುಟುಂಬಗಳಿವೆ ಎನ್ನಲಾಗಿದೆ.
Key words: Corona –rural- areas –Mysore-Positive – Pregnant-women- sealdown