ತೆಲಂಗಾಣ,ನವೆಂಬರ್,2,2020(www.justkannada.in): ಕೊರೋನಾ ಮಹಾಮಾರಿ ಹಿನ್ನೆಲೆ ಕಳೆದ ಆರೇಳು ತಿಂಗಳಿನಿಂದ ಬಂದ್ ಆಗಿದ್ದ ಶಾಲಾ-ಕಾಲೇಜುಗಳನ್ನು ತೆರೆಯಲು ದೇಶದ ಹಲವು ರಾಜ್ಯಗಳು ಸಿದ್ದತೆ ನಡೆಸುತ್ತಿದ್ದು ಈ ನಡುವೆ ಇಂದಿನಿಂದ ತೆಲಂಗಾಣದಲ್ಲಿ ಶಾಲಾ-ಕಾಲೇಜು ಆರಂಭವಾಗಲಿವೆ.
ಕೇಂದ್ರ ಸರ್ಕಾರ ಅನ್ ಲಾಕ್ 5.0 ಮಾರ್ಗಸೂಚಿಯಂತೆ ಶಾಲಾ-ಕಾಲೇಜು ಆರಂಭದ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಬಿಟ್ಟಿತ್ತು. ಇದೀಗ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ತೆಲಂಗಾಣ ಸರ್ಕಾರ ಇಂದಿನಿಂದ ಶಾಲಾ-ಕಾಲೇಜು ಆರಂಭಕ್ಕೆ ಅನುಮತಿ ನೀಡಿದೆ.
ಇಂದಿನಿಂದ 9, 10 ಹಾಗೂ ದ್ವಿತೀಯ ಪಿಯು ಕಾಲೇಜುಗಳು ಆರಂಭವಾಗಲಿದೆ. ನ.16ರಿಂದ ಪ್ರಥಮ ಪಿಯು ತರಗತಿ ಶುರುವಾಗಲಿದ್ದುಮ ನವೆಂಬರ್.23ರಿಂದ 6, 7, 8ನೇ ತರಗತಿ ಪ್ರಾರಂಭವಾಗಲಿದೆ. ಡಿಸೆಂಬರ್ 14 ರಿಂದ 1 ರಿಂದ 5ನೇ ತರಗತಿ ಆರಂಭವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
Key words: corona- School-college -start – Telangana