ಲಂಡನ್,ಡಿಸೆಂಬರ್,21,2020(www.justkannada.in): ಯುಕೆದಲ್ಲಿ ಕೊರೋನಾರ್ಭಟ ಮತ್ತೆ ಆರಂಭವಾಗಿದ್ದು ಯುಕೆನ ಪ್ರಧಾನಿ ಬೋರಿಸ್ ಜಾನ್ಸನ್ ಅವರು, ಲಂಡನ್ ಹಾಗೂ ಆಗ್ನೇಯ ಇಂಗ್ಲೆಂಡ್ ಭಾಗಗಳಲ್ಲಿ ಅನಿರ್ಧಿಷ್ಟಾವಧಿ ಲಾಕ್ ಡೌನ್ ಅನ್ನು ವಿಧಿಸಿದ್ದಾರೆ.
ಬ್ರಿಟನ್ ನ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ ಕಾಕ್ ಅವರು ತಮ್ಮ ದೇಶದಲ್ಲಿ ಕೊರೋನಾ ಸರ್ವವ್ಯಾಪಿ ನಿಯಂತ್ರಣ ತಪ್ಪಿರುವುದನ್ನು ಒಪ್ಪಿಕೊಂಡಿದ್ದು, ಆಗ್ನೇಯ ಇಂಗ್ಲೆಂಡ್ ಭಾಗಗಳಲ್ಲಿ ಲಾಕ್ ಡೌನ್ ವಿಧಿಸಿದ್ದಾರೆ. ಕ್ರಿಸ್ಮಸ್ ಹಬ್ಬ ಹೊಸ್ತಿಲಲ್ಲಿದ್ದು ಬಹಳ ಕಡಿಮೆ ಅವಧಿಯಲ್ಲಿ ಲಾಕ್ಡೌನ್ ಅನ್ನು ಘೋಷಿಸಿರುವುದು ಜನರಲ್ಲಿ ಗೊಂದಲ ಹಾಗೂ ಆಕ್ರೋಶವನ್ನು ಉಂಟು ಮಾಡಿದೆ. ಹಲವು ರಾಷ್ಟçಗಳು ಯುಕೆದಿಂದ ಬರುವ ಹಾಗೂ ತೆರಳುವ ವಿಮಾನಗಳನ್ನು ರದ್ದುಪಡಿಸಿವೆ.
ನೆದರ್ಲ್ಯಾಂಡ್ಸ್, ಇಟಲಿ ಹಾಗೂ ಬೆಲ್ಜಿಯಂ ದೇಶಗಳು ತಮ್ಮ ದೇಶಗಳಿಗೆ ಕೋವಿಡ್-19ನ ಹೊಸ ಭಿನ್ನರೂಪ ಪ್ರವೇಶವನ್ನು ತಡೆಗಟ್ಟಲು ಯುಕೆಗೆ ಹೋಗುವ ಹಾಗೂ ಬರುವ ವಿಮಾನಗಳನ್ನು ರದ್ದುಪಡಿಸಿವೆ. ಯೂರೋಪ್ನ ಇತರೇ ರಾಷ್ಟ್ರಗಳೂ ಸಹ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲು ಆಲೋಚಿಸುತ್ತಿವೆ ಎಂದು ವರದಿಯಾಗಿದೆ.
ಬ್ರಿಟನ್ ನ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ ಕಾಕ್ ಅವರು ಬಿಬಿಸಿಗೆ ನೀಡಿದ ಸಂದದರ್ಶನವೊಂದರಲ್ಲಿ ಕೊರೋನಾ ಪರಿಸ್ಥಿತಿ ಕೈಮೀರಿದ್ದು ನಿಯಂತ್ರಣಕ್ಕೆ ತರುವುದು ಬಹಳ ಕಷ್ಟವಾಗಿದೆ ಎಂದು ತಿಳಿಸಿದ್ದಾರೆ. “ಹಾಗಾಗಿ ಜನರು ಈ ಬಾರಿಯ ಕ್ರಿಸ್ಮಸ್ ಅನ್ನು ಮನೆಯಲ್ಲಿಯೇ ಆಚರಿಸುವುದು ಬಹಳ ಉತ್ತಮ,” ಎಂದು ಮನವಿ ಮಾಡಿಕೊಂಡಿದ್ದಾರೆ.
ಲಂಡನ್ ಹಾಗೂ ಆಗ್ನೇಯ ಇಂಗ್ಲೇಂಡ್ ಪ್ರಾಂತ್ಯಗಳಲ್ಲಿ ಕೋವಿಡ್ ನಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಕಳವಳಕಾರಿಯಾಗಿ ಹೆಚ್ಚುತ್ತಿರುವ ಕಾರಣದಿಂದಾಗಿ ಈ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ಎರಡು ಪ್ರಾಂತ್ಯಗಳಲ್ಲಿ ಕಟ್ಟೆಚ್ಚರವನ್ನು ಘೋಷಿಸಲಾಗಿದೆ. ಜನರು ಈ ಪ್ರಾಂತ್ಯಗಳಿಗೆ ಹೋಗುವುದು ಹಾಗೂ ಬರುವುದನ್ನು ನಿಷೇಧಿಸಲಾಗಿದೆ. ಈ ಬಾರಿ ಲಂಡನ್ನಲ್ಲಿ ವಿಧಿಸಿರುವ ಲಾಕ್ಡೌನ್, ಲಸಿಕೆಗಳು ಬರುವವರೆಗೂ ಮುಂದುವರೆಯಬಹುದು ಎಂದು ಹ್ಯಾನ್ ಕಾಕ್ ತಿಳಿಸಿದ್ದಾರೆ. ಈವರೆಗೂ 350,000 ಜನರಿಗೆ ಫೈಜರ್-ಬಯೊಎನ್ಟೆಕ್ ಲಸಿಕೆಯ ಮೊದಲ ಸುತ್ತನ್ನು ನೀಡಲಾಗಿದೆ.
ಭಾನುವಾರ ಬೆಳಿಗಿನಿಂದ ಈ ನಿರ್ಬಂಧಗಳು ಜಾರಿಗೆ ಬಂದಿದ್ದು, ಶನಿವಾರ ರಾತ್ರಿ ಲಂಡನ್ ನ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಹಾಗೂ ಎಲ್ಲಾ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿ, ಜನರು ಸುರಕ್ಷಿತ ಸ್ಥಳಗಳಿಗೆ ಹೋಗಲು ಪರದಾಡುತ್ತಿದ್ದರು ಎನ್ನಲಾಗಿದೆ.
ಕೃಪೆ: ಹಿಂದೂಸ್ತಾನ್ ಟೈಮ್ಸ್….
english summary…
New Covid variant haunts UK: Indefinite lockdown imposed, flights stopped
London, Dec. 21, 2020 (www.justkannada.in): The new variant has made Covid go out of control in the UK, forcing Prime Minister Boris Johnson to impose a lockdown for an indefinite period in London and Southeast England regions.
Speaking to the BBC, Britain’s Health Secretary Matt Hancock agreed that they have lost control due to the new wave of COVID pandemic and were forced to impose an indefinite lockdown. The sudden development has sparked fury among the citizens who were in the Christmas celebration preparation mood.
Netherlands, Italy, and Belgium have canceled all the flights to and from the UK to prevent the new covid variant from entering their countries. Several other European countries are also contemplating to follow this, according to the reports.
The lockdown imposed this time may continue till the vaccine reaches all in the country, said Matt Hancock, Britain’s Health Secretary. He has also requested the people to celebrate Christmas at home this year to prevent the spread of the pandemic.
source : hindustantimes
Keywords: UK/ COVID-19/ Corona/ Pandemic/ lockdown
Key words: Corona Start –UK-lockdown- flight -bandh