ಬೆಂಗಳೂರು,ಡಿಸೆಂಬರ್,26,2020(www.justkannada.in): ವಿದೇಶದಿಂದ ಬಂದ 1638 ಮಂದಿಗೆ ಕೊರೋನಾ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ 14 ಜನರಿಗೆ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಮಾಹಿತಿ ನೀಡಿದರು.
ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುಧಾಕರ್, ವಿದೇಶದಿಂದ ಬಂದವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಇಲ್ಲದಿದ್ದರೇ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ಈ ಮಧ್ಯೆ ವಿದೇಶದಿಂದ ಬಂದ 1638 ಮಂದಿಗೆ ಕೊರೋನಾ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ 14 ಜನರಿಗೆ ಪಾಸಿಟಿವ್ ಬಂದಿದೆ. ಕೊರೋನಾ ಸೋಂಕು ಪತ್ತೆಯಾದವರನ್ನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.
ಕೋವ್ಯಾಕ್ಸಿನ್ ಕೊರೋನಾಗೆ ನಾನು ಕೋವ್ಯಾಕ್ಸಿನ್ ಲಸಿಕೆ ಪಡೆದಿಲ್ಲ. ಇತರ ಸಚಿವರು ಯಾರು ಪಡೆದುಕೊಂಡಿದ್ದಾರೋ ಗೊತ್ತಿಲ್ಲ. ಇನ್ನು ಹೊಸ ವರ್ಷಕ್ಕೆ ಹೊಸ ಮಾರ್ಗಸೂಚಿ ಪಾಲಿಸಬೇಕಾಗುತ್ತದೆ. ಕೆಲ ಇಲಾಖೆಗಳಲ್ಲಿ ಸಮನ್ವಯತೆ ಅಗತ್ಯವಾಗಿದ್ದು ಆರೋಗ್ಯ ಮತ್ತು ಗೃಹ ಇಲಾಖೆಯ ಸಮನ್ವಯತೆಯಲ್ಲಿ ಮಾರ್ಗಸೂಚಿ ತರಲಾಗುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದರು.
Key words: Corona Test – 1638 people – abroad- Positive-Minister –Sudhakar- information