ಮೈಸೂರು,ಅಕ್ಟೋಬರ್,27,2020(www.justkannada.in): ಕೊರೋನಾ ಆರ್ಭಟದ ನಡುವೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ತಾಂತ್ರಿಕ ಸಲಹಾ ಸಮಿತಿ ಮಾರ್ಗಸೂಚಿಯಂತೆ ಸರಳ ಮತ್ತು ಸಾಂಪ್ರದಾಯಿಕವಾಗಿ ಯಶಸ್ವಿಯಾಗಿ ನಡೆದಿದೆ.
ತಾಂತ್ರಿಕ ಸಲಹಾ ಸಮಿತಿ ಮಾರ್ಗಸೂಚಿಯಂತೆ ಮೈಸೂರು ದಸರಾ ವೇಳೆ ಪಾಲ್ಗೊಳ್ಳುವ ಎಲ್ಲರಿಗೂ ಕೊರೋನಾ ಟೆಸ್ಟ್ ಕಡ್ಡಾಯ ಮಾಡಲಾಗಿತ್ತು. ಈ ನಡುವೆ ಇದೀಗ ಮೈಸೂರು ಅರಮನೆ ನೋಡುಲು ಹೋಗುವ ಪ್ರವಾಸಿಗರಿಗೂ ಕೊರೋನಾ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಹೌದು, ಇನ್ಮುಂದು ಅರಮನೆ ಪ್ರವೇಶಕ್ಕೂ ಮುನ್ನ ಕೊರೋನಾ ಟೆಸ್ಟ್ ಕಡ್ಡಾಯವಾಗಿ ಮಾಡಿಸಬೇಕಾಗಿದೆ.
ಕೊರೊನಾ ಟೆಸ್ಟ್ ಗಾಗಿ ಅರಮನೆ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಪ್ರವಾಸಿಗರಿಗೂ ಸ್ಥಳದಲ್ಲೇ ಕೊರೋನಾ ಟೆಸ್ಟ್ ಮಾಡಲಾಗುತ್ತಿದೆ. ಐದಕ್ಕೂ ಹೆಚ್ಚು ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಪರೀಕ್ಷೆ ಮಾಡುತ್ತಿದ್ದು, ವರದಿ ನೆಗಟಿವ್ ಬಂದ್ರೆ ಮಾತ್ರ ಅರಮನೆ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿದೆ.
ಅರಮನೆ ಆವರಣದಲ್ಲಿ ಪ್ರತಿನಿತ್ಯ ಕರೋನ ಪರೀಕ್ಷೆ ನಡೆಯುತ್ತಿದ್ದು, ಮೈಸೂರು ಅರಮನೆ ವೀಕ್ಷಣೆಗೆ ತೆರಳುವವರು ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸಿದ ಬಳಿಕ ವರದಿ ನೆಗೆಟಿವ್ ಬಂದರೇ ಮಾತ್ರ ಅರಮನೆ ವೀಕ್ಷಣೆ ಮಾಡಬಹುದಾಗಿದೆ.
ತಾಂತ್ರಿಕ ಸಲಹಾ ಸಮಿತಿ ಪ್ರಕಾರ ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಕೊರೋನಾ ಟೆಸ್ಟ್ ಮಾಡಲಾಗಿತ್ತು. ಅರಮನೆ ಸಿಬ್ಬಂದಿ, ಗಜಪಡೆಯ ಮಾವುತರು, ಕಾವಾಡಿಗಳಿಗೂ ಕೊರೋನಾ ಪರೀಕ್ಷೆ ಮಾಡಲಾಗಿತ್ತು.
Key words: Corona Test – Compulsory –mysore Palace-tourist