ಬೆಂಗಳೂರು,ಜೂ,19,2020(www.justkannada.in): ರಾಜ್ಯದಲ್ಲಿ ಕೊರೋನಾ ಅಬ್ಬರ ಹೆಚ್ಚಾಗುತ್ತಿದ್ದು ಈ ನಡುವೆ ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ರಾಜ್ಯ ಸರ್ಕಾರ ದರ ನಿಗದಿ ಮಾಡಿದೆ. ಟಾಸ್ಕಫೋರ್ಸ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ದಿನಕ್ಕೆ ಜನರಲ್ ವಾರ್ಡ್ ಗೆ ಚಿಕಿತ್ಸಾ ವೆಚ್ಚ 5,200 ರೂ. ನಿಗದಿ ಮಾಡಲಾಗಿದ್ದು, ಐಸೋಲೇಶನ್ ವಾರ್ಡ್ ಗೆ ಪ್ರತಿ ದಿನಕ್ಕೆ 8,500 ರೂಪಾಯಿ ದರ ನಿಗದಿಪಡಿಸಲಾಗಿದೆ.
ಹಾಗೆಯೇ ಗಂಟಲು ದ್ರವ ಪರೀಕ್ಷೆಗೆ 2600 ರೂಪಾಯಿ, ಜನರಲ್ ವಾರ್ಡ್ ವಿತ್ ಆಕ್ಸಿಜನ್ ಗೆ 7,500 ರೂಪಾಯಿ, ಐಸಿಯು ವಿತ್ ವೆಂಟಿಲೇಟರ್ ಗೆ 12,000 ರೂ.ಅನ್ನ ಸರ್ಕಾರ ನಿಗದಿಪಡಿಸಿದೆ. ಶೀಘ್ರದಲ್ಲೇ ಈ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ.
Key words: Corona -treatment – private hospitals – charge – government.