ನವದೆಹಲಿ,ಅಕ್ಟೋಬರ್,23,2020(www.justkannada.in): ಕೊರೋನಾ ಲಸಿಕೆ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಮಹತ್ವದ ಸೂಚನೆ ನೀಡಿದೆ. ಕೊರೋನಾ ಲಸಿಕೆಯ ಖರೀದಿಗೆ ಪ್ರತ್ಯೇಕ ಯೋಜನೆ ಬೇಡವೆಂದು ರಾಜ್ಯಸರ್ಕಾರಗಳಿಗೆ ಕೇಂದ್ರ ಸರ್ಕಾರದಿಂದ ಸೂಚನೆ ನೀಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ಲಸಿಕೆ ಸಿಕ್ಕ ನಂತರ ಆದ್ಯತಾ ವಲಯಕ್ಕೆ ಉಚಿತವಾಗಿ ಕೇಂದ್ರ ಸರ್ಕಾರದಿಂದ ಲಸಿಕೆ ನೀಡಲು ಯೋಜನೆ ಸಿದ್ಧಪಡಿಸಲಾಗಿದೆ. ರಾಜ್ಯ, ಜಿಲ್ಲಾ ನೆಟ್ವರ್ಕ್ ಮೂಲಕ ಲಸಿಕೆ ನೀಡಲಾಗುವುದು ಎಂದು ತಿಳಿಸಿದೆ.
ಆರಂಭಿಕ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲಾಗುವುದು. ನವೆಂಬರ್ ನಲ್ಲಿ ಆದ್ಯತಾ ವಲಯದ ಪಟ್ಟಿ ತಯಾರಿಸಲಾಗುವುದು. ಡಿಜಿಟಲ್ ಪ್ಲಾಟ್ ಫಾರಂ ಬಳಸಿ ಲಸಿಕೆ ನೀಡಲು ಸಿದ್ಧ ಎಂದು ಕೇಂದ್ರ ಸರ್ಕಾರ ತಿಳಿಸಿದೆ ಎನ್ನಲಾಗಿದೆ.
Key words: Corona-vaccine-Central Government – instruct-State Governments.