ಮಂಗಳೂರು,ಜನವರಿ,16,2021(www.justkannada.in): ಇಂದು ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು ಈ ಮಧ್ಯೆ ಡಿ ಗ್ರೂಪ್ ನೌಕರರ ಮೇಲೆ ಕೊರೊನಾ ಲಸಿಕೆ ಪ್ರಯೋಗ ಮಾಡಿರುವುದಕ್ಕೆ ಮಾಜಿ ಸಚಿವ ಯು.ಟಿ. ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ಯು.ಟಿ ಖಾದರ್, ಕೊರೊನಾ ಲಸಿಕೆ ಬಂದಿರುವುದು ಸಂತೋಷ. ಆದರೆ ಬಡಪಾಯಿ ಡಿ ಗ್ರೂಪ್ ನೌಕರರ ಮೇಲೆ ಕೊರೋನಾ ಲಸಿಕೆ ಪ್ರಯೋಗ ಮಾಡುತ್ತಿರುವುದು ಏಕೆ..? ಮೊದಲು ಮಂತ್ರಿಗಳು, ಶಾಸಕರು ಲಸಿಕೆಯನ್ನು ಹಾಕಿಸಿಕೊಳ್ಳಲಿ ಎಂದಿದ್ದಾರೆ.
ಬೇರೆ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಲು ಆಡಂಬರದಿಂದ ಹೋಗುವ ಮಂತ್ರಿಗಳು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಮೊದಲು ಲಸಿಕೆ ಪಡೆದು ಮಾದರಿಯಾಗಬೇಕು ಎಂದು ಮಾಜಿ ಸಚಿವ ಯುಟಿ ಖಾದರ್ ಸಲಹೆ ನೀಡಿದ್ದಾರೆ.
Key words: corona vaccine-Experiment -D-Group- employees –congress mla- UT khadar