ಬೆಂಗಳೂರು,ಏಪ್ರಿಲ್,26,2021(www.justkannada.in): ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಮಹಾಮಾರಿ ತಡೆಗಟ್ಟಲು ಸರ್ಕಾರ ಬಿಗಿ ಕ್ರಮಕ್ಕೆ ಮುಂದಾಗಿದ್ದು ಈ ನಡುವೆ ರಾಜ್ಯದಲ್ಲಿ ನಾಳೆ ಸಂಜೆ 9 ರಿಂದ 14 ದಿನಗಳ ಕಾಲ ಲಾಕ್ ಡೌನ್ ಮಾಡಿ ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಕೊರೋನಾ ನಿಯಂತ್ರಣ ಸಂಬಂಧ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಈ ಕೋವಿಡ್ ಸೋಂಕು ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಹೀಗಾಗಿ ಸಚಿವ ಸಂಪುಟ ಸದಸ್ಯರು, ತಜ್ಞರ ಜೊತೆಗೆ ಚರ್ಚಿಸಿ, ಕೆಲವು ನಿರ್ಧಾರಕ್ಕೆ ಬಂದಿದ್ದೇವೆ. ಸರ್ಕಾರಿ ಆಸ್ಪತ್ರೆಯಲ್ಲಿ 18 ವರ್ಷದಿಂದ 45ವರ್ಷದವರಿಗೆ ಉಚಿತವಾಗಿ ಕೊರೋನಾ ಲಸಿಕೆ ನೀಡಲಾಗುತ್ತದೆ. ಈ ಬಗ್ಗೆ ರೂಪುರೇಷೆಗಳನ್ನು ಆರೋಗ್ಯ ಇಲಾಖೆ ಪ್ರಕಟಿಸಲಿದೆ ಎಂದು ತಿಳಿಸಿದರು.
ಈ ಕೋವಿಡ್ ತಡೆಯೋದಕ್ಕೆ ಬಿಗಿ ಕ್ರಮವಾಗಿ ನಾಳೆ ರಾತ್ರಿಯಿಂದ 14 ದಿನ ಬಿಗಿ ಕ್ರಮ ಜಾರಿಯಲ್ಲಿರುತ್ತದೆ. ಬೆಳಿಗ್ಗೆ 6 ರಿಂದ 10ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 10 ಗಂಟೆಯ ನಂತರ ಎಲ್ಲವೂ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ. ಯಾವುದೇ ಸಾರಿಗೆ ಸಂಚಾರ ಇರುವುದಿಲ್ಲ. ಮೆಟ್ರೋ, ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಸಂಚಾರ ಬಂದ್ ಆಗಿರುತ್ತದೆ. ಅಂತರರಾಜ್ಯ ಬಸ್ ಸಂಚಾರವೂ ಕೂಡ ಬಂದ್ ಆಗಲಿದೆ. ಗಾರ್ಮೆಂಟ್ಸ್ ನೌಕರರನ್ನು ಬಿಟ್ಟು, ಕಟ್ಟಡ ಕಾಮಗಾರಿ, ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಿಲ್ಲ. ವೈದ್ಯಕೀಯ, ಅಗತ್ಯ ಸೇವೆ ಎಂದಿನಂತೆ ಇರಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲಿ ಎಂದಿನಂತೆ ಕರ್ಫ್ಯೂ ಮುಂದುವರೆಯುತ್ತದೆ. ಉತ್ಪಾದನಾ ವಲಯ ಎಂದಿನಂತೆ ಮುಂದುವರೆಯುತ್ತೆ. ಕೃಷಿ ಉತ್ಪಾದನಾ ಚಟುವಟಿಕೆಗೆ ತೊಂದರೆ ಇಲ್ಲ. ನಾಳೆ ರಾತ್ರಿಯಿಂದ 14 ದಿನ ಕೊರೋನಾ ತಡೆಗೆ ಕರ್ನಾಟಕದಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಬಾರ್ ಗಳಲ್ಲಿ ಪಾರ್ಸೆಲ್ ತೆಗೆದುಕೊಳ್ಳಲು ಅವಕಾಶವಿರುತ್ತದೆ ಎಂದು ತಿಳಿಸಿದರು.
ENGLISH SUMMARY….
KARNATAKA:
CM BS Yediyurappa addresses a presser after cabinet meeting
– The virus is spreading aggressively across the state. It’s worse than Maharashtra and Delhi
– We will vaccinate people above the age of 18 free of cost at govt hospitals
– Above 45 years the central govt is anyway vaccinating them free of cost
– From tomorrow, for 14 days, there will be strict measure in place across the state.
– Essential groceries will allowed to be purchased between 6am to 10am
[2:42 pm, 26/04/2021] Mahesh Sir Jk: Manufacturing sector apart from garments, construction and agricultural sectors will continue, no prohibitions
– Essential services will continue
– Curfew will be in place as we have seen on weekends
– DCs will have to take strict measures
People will have to cooperate. If they do, then we can achieve our target.
– Inter/intra-state travel will not be allowed on these days. Only for emergency purposes, they’ll be allowed
Key words: Corona Vaccine- Free- Lockdown – state – 14 days-CM BS Yeddyurappa