ವಿಜಯನಗರ,ಏಪ್ರಿಲ್,11,2021(www.justkannada.in): ರಾಜ್ಯದಲ್ಲಿ ಕೊರೋನಾ ಮಹಾಮಾರಿ 2ನೇ ಅಲೆ ವೇಗವಾಗಿ ಹರಡುತ್ತಿದ್ದು ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ರಾಜ್ಯದ 8 ನಗರಗಳಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.
ಈ ಮಧ್ಯೆ ಕೊರೋನಾ ಹಿನ್ನೆಲೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಉಚ್ಚೆಂಗೆಮ್ಮ ದೇವಾಲಯದ ಉಚ್ಚೆಂಗೆಮ್ಮ ಜಾತ್ರೆಯನ್ನ ರದ್ದು ಮಾಡಲಾಗಿದೆ. ಏಪ್ರಿಲ್ 12 ರಿಂದ 15ರವರೆಗೆ ಜಾರಿ ನಡೆಯಬೇಕಾಗಿತ್ತು. ಆದರೆ ಕೊರೋನಾ ಹಿನ್ನೆಲೆ ಜಾತ್ರೆ ರದ್ಧು ಮಾಡಲಾಗಿದ್ದು ಪೊಲೀಸರು ಭಕ್ತರನ್ನ ಹಿಂದಕ್ಕೆ ಕಳುಹಿಸುತ್ತಿದ್ದಾರೆ.
Key words: corona-vijayanagara-district-ucchengemma jatra-cancel