ಮೈಸೂರು,ಮಾ,13,2020(www.justkannada.in): ಮಹಾಮಾರಿ ಕೊರೋನಾ ವೈರಸ್ ಗೆ ದೇಶದಲ್ಲಿ ಮೊದಲ ಬಲಿಯಾಗಿದ್ದು ಕಲ್ಬುರ್ಗಿಯಲ್ಲಿ ವೃದ್ಧ ಕೊರೋನಾದಿಂದಲೇ ಸಾವನ್ನಪ್ಪಿರುವುದು ಆರೋಗ್ಯ ಇಲಾಖೆಯಿಂದ ದೃಢವಾಗಿದೆ. ಹೀಗಾಗಿ ಕೊರೋನಾ ಭೀತಿ ಎಲ್ಲಡೆ ಆತಂಕವನ್ನುಂಟು ಮಾಡಿದ್ದು ತರಕಾರಿ ಮಾರುಕಟ್ಟೆಗೂ ಇದರ ಎಫೆಕ್ಟ್ ತಟ್ಟಿದೆ.
ಕೊರೊನಾ ವೈರಸ್ ಎಫೆಕ್ಟ್ ನಿಂದಾಗಿ ಎಂಜಿ ರಸ್ತೆಯ ತರಕಾರಿ ಮಾರುಕಟ್ಟೆ ಗ್ರಾಹಕರಿಲ್ಲದೆ ಬಣಗುಡುತ್ತಿದೆ. ರೈತರು ತಾವೇ ಬೆಳೆದ ತರಕಾರಿ ಮಾರಾಟ ಮಾಡುವ ಗನ್ ಹೌಸ್ ಬಳಿ ಇರುವ ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರು ಆಗಮಿಸದ ಹಿನ್ನೆಲೆ ರೈತರು ವ್ಯಾಪಾರವಿಲ್ಲದೇ ಕಂಗಾಲಾದ್ದಾರೆ.
ಕೊರೊನಾ ಭೀತಿ ಹಿನ್ನೆಲೆ ತರಕಾರಿ ಮಾರುಕಟ್ಟೆಗೆ ಬರಲು ಗ್ರಾಹಕರು ಹಿಂದೇಟು ಹಾಕುತ್ತಿದ್ದು, ರೈತರು ಹಾಗೂ ಸಣ್ಣ ಪ್ರಮಾಣದ ವ್ಯಾಪಾರಿಗಳು ವ್ಯಾಪಾರವಿಲ್ಲದೆ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಕರೊನಾ ಹಿನ್ನೆಲೆಯಲ್ಲಿ ರಾಜ್ಯದ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.
Key words: Corona Virus -Effect.Vegetable market -without -customers.