ಕಲ್ಬುರ್ಗಿ,ಮಾ,13,2020(www.justkannada.in): ಕೊರೋನಾ ವೈರಸ್ ನಿಂದ ವೃದ್ಧ ಸಾವನ್ನಪ್ಪಿದ ಹಿನ್ನೆಲೆ ಕಲ್ಬುರ್ಗಿ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು ಜಿಲ್ಲೆಯ ಶಾಲಾ ಕಾಲೇಜುಗಳೀಗೆ ಒಂದು ವಾರಗಳ ಕಾಲ ರಜೆ ಘೋಷಣೆ ಮಾಡಲಾಗಿದೆ.
ಕೊರೋನಾ ಸೋಂಕಿನಿಂದ ವೃದ್ಧ ಸಾವನ್ನಪ್ಪಿರುವ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಲ್ಬುರ್ಗಿ ಜಿಲ್ಲಾಧಿಕಾರಿ ಬಿ.ಶರತ್ , ವೃದ್ಧ ಜ್ವರದಿಂದ ಆಸ್ಪತ್ರೆಗೆ ದಾಖಲಾದಾಗ ಮಾಹಿತಿ ಕೊಟ್ಟಿದ್ದವು ಆತನಿಗೆ ಕುಟುಂಬದವರಿಗೆ ಎಲ್ಲಾ ಮಾಹಿತಿ ಕೊಟ್ಟಿದ್ದವು. ಆದರೆ ವೈದ್ಯರ ಸೂಚನೆ ನಿರ್ಲಕ್ಷಿಸಿ ಹೈದರಾಬಾದ್ ಗೆ ಕರೆದೊಯ್ದರು. ಇದೀಗ ವೃದ್ಧನ ಕುಟುಂಬದ ನಾಲ್ವರಲ್ಲಿ ಕೆಮ್ಮು ನೆಗಡಿ ಪ್ರಾರಂಭವಾಗಿದೆ. ವೃದ್ಧ ಸಾವು ಹಿನ್ನೆಲೆ 65 ಮಂದಿ ಜನರ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದರು.
ಕೊರೋನಾ ವೈರಸ್ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಾದ್ಯಂತ ಬಯೋಮೆಟ್ರಿಕ್ ವ್ಯವಸ್ಥೆ ರದ್ದುಗೊಳಿಸಲಾಗಿದೆ. ಐಎಸ್ ಐ ಆಸ್ಪತ್ರೆಯಲ್ಲಿ ವಾರ್ಡ್ ಗಳಲ್ಲಿ 200 ಬೆಡ್ ಗಳ ವಾರ್ಡ್ ಸಿದ್ಧವಾಗಿದ್ದು, ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. ಮಾಲ್ ಥಿಯೇಟರ್ ಪಾರ್ಕ್ ತೆರೆಯದಂತೆ ಸೂಚಿಸಿದ್ದೇನೆ ಪ್ರತಿದಿನ ಕೊರೋನಾ ಸಂಬಂಧ ಜಾಗೃತಿಗೆ ಸೂಚನೆ ನೀಡಿದ್ದೇವೆ ಎಂದು ಕಲ್ಬುರ್ಗಿ ಡಿಸಿ ಶರತ್ ತಿಳಿಸಿದರು.
ವೃದ್ಧನ ಸಂಪರ್ಕದಲ್ಲಿದ್ದವರಿಗೆ ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೋನಾ ಸಂಬಂಧ ಲ್ಯಾಬ್ ತೆರೆಯಲು ಕ್ರಮಕೈಗೊಳ್ಳಲಾಗುತ್ತಿದೆ. ಜನಸಂದಣಿ ಇರುವ ಜಾಗಕ್ಕೆ ಜನರು ಹೋಗಬಾರದು ಎಂದು ಡಿಸಿ ಶರತ್ ಸಲಹೆ ನೀಡಿದರು.
Key words: corona virus-High Alert – Kalburgi District-DC-B. Sharath