ಬೆಂಗಳೂರು,ನವೆಂಬರ್,08,2020(www.justkannada.in) : ಬಾರ್ ನಲ್ಲಿ ಕುಡಿಯೋದ್ರಿಂದ ಕೊರೊನಾ ಬರಲ್ವಾ? ಸಿನಿಮಾ, ಮಾಲ್ ಎಲ್ಲಾ ಒಪೆನ್ ಮಾಡಿದ್ದಾರೆ. 3 ದಿನ ಪಟಾಕಿ ಹೊಡೆದರೆ ಬೆಂಗಳೂರು ಏನು ಹಾಳಾಗಿ ಹೋಗಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದರು.ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ 2 ಸಾವಿರದ ಪಟಾಕಿ ಸಿಡಿಸಿ ಪ್ರತಿಭಟನೆ
ರಾಜ್ಯದಲ್ಲಿ ಪಟಾಕಿ ಮಾರಾಟ ಮತ್ತು ಬಳಕೆ ಮೇಲೆ ಸರ್ಕಾರ ಕೆಲ ನಿರ್ಬಂಧ ಹೇರಿರುವುದನ್ನು ಖಂಡಿಸಿ ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ 2 ಸಾವಿರದ ಸರಪಟಾಕಿ ಸಿಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ದೀಪಾವಳಿ ಅಂದ್ರೆ ಪಟಾಕಿ ಹೊಡೆಯಲೇಬೇಕು
ಈ ವೇಳೆ ಮಾತನಾಡಿದ ಅವರು, ದೀಪಾವಳಿ ಅಂದ್ರೆ ಪಟಾಕಿ ಹೊಡೆಯಲೇಬೇಕು. ಸರ್ಕಾರ ನಿರ್ಬಂಧ ಹೇರಿರೋದು ಸರಿಯಲ್ಲ. ಸರ್ಕಾರ ದೀಪಾವಳಿಗೆ ಪಟಾಕಿ ಹೊಡೆಯಬಾರದು ಅಂತಾ ಹೇಳಿದೆ. ಇದು ಇಡೀ ದೇಶದ ಹಬ್ಬ ಎಂದರು.
ಎಚ್ಚರಿಕೆಯಿಂದ ಎಲ್ಲರೂ ಪಟಾಕಿ ಹಚ್ಚಿ
ಸರ್ಕಾರಕ್ಕೆ ಬುದ್ಧಿಯಿಲ್ಲ. ಪಟಾಕಿ ಹೊಡೆದಿಲ್ಲ ಅಂದ್ರೆ ದೀಪಾವಳಿ ಹಬ್ಬ ಪರಿಪೂರ್ಣವಾಗಲ್ಲ. ಜನ ಇಷ್ಟು ವರ್ಷಗಳಿಂದ ಹಬ್ಬ ಮಾಡಿಕೊಂಡು ಬಂದಿದ್ದಾರೆ. ಕಣ್ಣಿಗೆ ತೊಂದರೆಯಾಗಬಹುದು. ಹಾಗಾಗಿ, ಎಚ್ಚರಿಕೆಯಿಂದ ಎಲ್ಲರೂ ಪಟಾಕಿ ಹಚ್ಚಿ,. ಪಟಾಕಿ ಯುವಕರ ಹಬ್ಬ. ಸರ್ಕಾರ ಎಲ್ಲಾ ಬೋಗಸ್, ಸುಳ್ಳು ಹೇಳುತ್ತದೆ ಎಂದು ಕಿಡಿಕಾರಿದರು.
ಸಿಗರೇಟ್ ನಿಂದ ತೊಂದರೆ ಅಗಲ್ವಾ?
ಸರ್ಕಾರಕ್ಕೆ ಬುದ್ಧಿಯಿಲ್ಲ. ಸಿಗರೇಟ್ ನಿಂದ ತೊಂದರೆ ಅಗಲ್ವಾ?, ಪಟಾಕಿಯಿಂದ ಕೊರೊನಾ ಬರುತ್ತೆ ಅಂತಾ ಯಡಿಯೂರಪ್ಪ ಹೇಳಿದ್ದಾರೆ. ಹಸಿರು ಪಟಾಕಿ ಅಂದ್ರೆ ಸುರ್ಸುರ್ ಬತ್ತಿ. ಅದು ಲೆಕ್ಕಕ್ಕೆ ಇಲ್ಲ. ನಾನು 3 ದಿನ ಕೂಡ ಪಟಾಕಿ ಹಚ್ಚುತ್ತೇನೆ. ನನ್ನನ್ನು ಜೈಲಿಗೆ ಹಾಕಿದ್ರು ಪರವಾಗಿಲ್ಲ ಎಂದು ಹೇಳಿದರು.
key words : Corona-Baralwa-Kudiyod-Bar?-Vatal Nagaraj