ಬೆಂಗಳೂರು,ಸೆಪ್ಟೆಂಬರ್,21,2020(www.justkannada.in) : ಕೊರೊನಾ ಸೋಂಕು ಯಾರಿಗೂ ಬರಬಾರದು. ಸೋಂಕು ಬಂದರೆ ಸಾಮಾಜಿಕ ಬಹಿಷ್ಕಾರ ಹಾಕಿದಂತ್ತಾಗುತ್ತದೆ. ಹೀಗಾಗಿ, ಕೊರೊನಾ ಬಾರದಂತೆ ಎಚ್ಚರಿಕೆವಹಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.ವಿಧಾನಸಭೆಯಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಕೊರೋನಾ ಸೋಂಕಿಗೆ ತುತ್ತಾದಾಗ ನನ್ನ ಹೆಂಡತಿಯು ನನ್ನ ನೋಡುವ ಹಾಗೇ ಇರಲಿಲ್ಲ. ಕುಟುಂಬದವರು ಬಂದು ಊಟ ಕೊಡುವಂತೆಯೂ ಇರಲಿಲ್ಲ. ಬಳಿಕ ನನ್ನ ಕುಟುಂಬದ ಎಲ್ಲರಿಗೂ ಕೊರೊನಾ ಸೋಂಕು ತಗುಲಿ ಅಡುಗೆ ಮಾಡುವುದಕ್ಕೂ ಯಾರು ಇಲ್ಲದಂತ್ತಾಗಿತ್ತು. ಈ ಸಂದರ್ಭ ಮೈಸೂರಿನಿಂದ ಬೇರೆಯವರನ್ನು ಕರೆಸಿಕೊಳ್ಳಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಕೊರೊನಾ ಬರುವುದಕ್ಕಿಂತ ಮುಂಚೆ ಡಿಕೆಶಿ ಮಾಸ್ಕ್ ಹಾಕಿಕೊಳ್ಳುತ್ತಿರಲಿಲ್ಲ. ಗುಣಮುಖರಾದ ಬಳಿಕ ಮಾಸ್ಕ್ ಹಾಕಿಕೊಳ್ಳತ್ತಿದ್ದಾರೆ. ಎಲ್ಲರೂ ಕೊರೋನಾ ಕುರಿತಂತೆ ಎಚ್ಚರಿಕೆವಹಿಸಬೇಕು ಎಂದು ಸಲಹೆ ನೀಡಿದರು.
key words ; Corona-comes-social-exclusion-extinguished-former-CM Siddaramaiah