ನ್ಯೂಯಾರ್ಕ್/ವಾಷಿಂಗ್ಟನ್, ಏಪ್ರಿಲ್ 24, 2020 (www.justkannada.in): ಕೊರೊನಾ ವೈರಸ್ ದಾಳಿ ಅಮೆರಿಕ ಅಲ್ಲೋಲ ಕಲ್ಲೋಲವಾಗಿದೆ. ಸೂಪರ್ಪವರ್ ದೇಶದಲ್ಲಿ ಮೃತರ ಸಂಖ್ಯೆ 50,000ಕ್ಕೇರಿದೆ.
ಅಧಿಕೃತ ವರದಿಗಳ ಪ್ರಕಾರ ವಿಶ್ವದಲ್ಲೇ ಕೋವಿಡ್-19ಗೆ ಅತಿಹೆಚ್ಚು ರೋಗಿಗಳು ಬಲಿಯಾದ ದೇಶ ಎಂಬ ಕುಖ್ಯಾತಿಗೆ ಅಮೆರಿಕ ಪಾತ್ರವಾಗಿದೆ. ಅಲ್ಲದೇ 9 ಲಕ್ಷಕ್ಕೂ ಅಧಿಕ ಜನರಲ್ಲಿ ಮಾರಕ ಸೋಂಕು ದೃಢಪಟ್ಟಿದೆ.
ಸೋಂಕಿತರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಮುಂದಿನ 24 ತಾಸುಗಳಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ವಾಷಿಂಗ್ಟನ್ನ ಜಾನ್ಸ್ ಹಾಪ್ಕಿನ್ಸ್ ಯೂನಿವರ್ಸಿಟಿ ಬಿಡುಗಡೆ ಮಾಡಿರುವ ಅಂಕ ಅಂಶಗಳ ಪ್ರಕಾರ, ನಿನ್ನೆ ಒಂದೇ ದಿನದ ಅವಧಿಯಲ್ಲಿ ಅಮೆರಿಕದಲ್ಲಿ 3,178 ಮಂದಿ ಬಲಿಯಾಗಿದ್ದಾರೆ.
ಅಲ್ಲದೇ ಸುಮಾರು 4,000 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ. ಸ್ವಲ್ಪ ಸಮಾಧಾನಕರ ಸಂಗತಿ ಎಂದರೆ ಅಮೆರಿಕದಲ್ಲಿ ಈವರೆಗೆ 86,000 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.