ಮಂಡ್ಯ, ಮೇ 17, 2020 (www.justkannada.in): ಮಂಡ್ಯದಲ್ಲಿ ಕೊರೋನಾ ವೈರಸ್ ಅರ್ಧಶತಕ ಭಾರಿಸಿದೆ.
ಗ್ರೀನ್ ಝೋನ್ ನಲ್ಲಿದ್ದ ಮದ್ದೂರಿಗೂ ಮಾರಕ ಸೋಂಕು ಪ್ರಸರಿಸಿದೆ. ಮಂಡ್ಯ ಜಿಲ್ಲೆಯ ಮಟ್ಟಿಗೆ ಗ್ರೀನ್ ಜೋನ್ನಲ್ಲಿದ್ದ ಮದ್ದೂರು ತಾಲ್ಲೂಕಿನಲ್ಲಿ ಕೂಡ ಇಂದು ಪ್ರಪ್ರಥಮಭಾರಿಗೆ ಓರ್ವವ್ಯಕ್ತಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.
ಇದರೊಂದಿಗೆ ಮಂಡ್ಯ ಜಿಲ್ಲೆಯಲ್ಲಿ ಬರೋಬ್ಬರಿ ಅರ್ಧಶತಕದಷ್ಟು ಕೊರೊನಾ ಪ್ರಕರಣಗಳು ಪತ್ತೆಯಾದಂತಾಗಿದೆ. ಪಿ ೧೦೫೭ ಸಂಖ್ಯೆ ೪೦ ವರ್ಷದ ವ್ಯಕ್ತಿಗೆ ಇಂದು ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ನಿನ್ನೆಯವರೆಗೂ ಮಂಡ್ಯ ಜಿಲ್ಲೆಯಲ್ಲಿ ೪೯ ಪ್ರಕರಣಗಳಿದ್ದು ಇವತ್ತಿನ ೧ ಪ್ರಕರಣ ಸೇರಿ ಒಟ್ಟಾರೆ ೫೦ ಪ್ರಕರಣ ದಾಖಲಾಗಿವೆ.