ಬೆಂಗಳೂರು,ಮಾ,13,2020(www.justkannada.in): ಪ್ರಪಂಚವನ್ನೇ ಕಾಡುತ್ತಿರುವ ಕೊರೋನಾ ನಮ್ಮ ದೇಶ ಹಾಗೂ ರಾಜ್ಯದಲ್ಲೂ ಭೀತಿ ಉಂಟು ಮಾಡಿದೆ. ಈ ನಡುವೆ ಕೊರೋನಾ ಸೋಂಕಿನಿಂದ ಕಲ್ಬುರ್ಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಈ ಹಿನ್ನೆಲೆ ರಾಜ್ಯಾದ್ಯಂತ ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಿದೆ.
ಈ ನಡುವೆ ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆ ನಾಳೆಯಿಂದ ಒಂದು ವಾರದವರೆಗೆ ಮಾಲ್ ಗಳು, ಥಿಯೇಟರ್, ಕಾಲೇಜುಗಳು, ವಿವಿಗಳು ಬಂದ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಸಿಎಂ ಬಿಎಸ್ ಯಡಿಯೂರಪ್ಪ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆ ನಾಳೆಯಿಂದ ಒಂದು ವಾರದವರೆಗೆ ಮಾಲ್ ಗಳು, ಥಿಯೇಟರ್, ಕಾಲೇಜುಗಳು, ವಿವಿಗಳು ಬಂದ್ ಮಾಡಲಾಗಿದೆ. ಮದುವೆ ಸಮಾರಂಭಗಳು, ನಿಶ್ಚಿತಾರ್ಥ ಸಮಾರಂಭಗಳು, ಪಬ್ ಅಂಡ್ ನೈಟ್ ಕ್ಲಬ್ ಕ್ರೀಡಾ ಕಾರ್ಯಕ್ರಮಗಳು ಎಲ್ಲಾ ಕಾರ್ಯಕ್ರಮಗಳನ್ನ ರದ್ದು ಮಾಡುಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸೂಚಿಸಿದ್ದಾರೆ.
ಇನ್ನು ಐಟಿ ಬಿಟಿಯವರಿಗೆ 1ವಾರಗಳ ಕಾಲ ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ಸರ್ಕಾರಿ ಕಚೇರಿ ಅಧಿವೇಶನ ಎಂದಿನಂತೆ ನಡೆಯಲಿದೆ ಅಂತರಾಷ್ಟ್ರೀಯ ವೀಸಾಗಳಿಗೆ ಏಪ್ರಿಲ್ 15 ರವರೆಗೆ ನಿರ್ಬಂಧ ಹೇರಲಾಗಿದೆ. ಹಾಗೆಯೇ ಪರೀಕ್ಷೆಗಳು ನಿಗದಿಯಂತೆ ನಡೆಯಲಿದೆ. ಯಾವುದೇ ತೊಂದರೆ ಇಲ್ಲ. ಒಂದು ವಾರದ ಬಳಿಕ ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರದ ಬಗ್ಗೆ ಚರ್ಚಿಸುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
Key words: coronavirus –horror- Mal- theatre- wedding ceremony –bandh- tomorrow