ಬೆಂಗಳೂರು, ಜನವರಿ 16, 2022 (www.justkannada.in): ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್’ ನಿಂದ ಹಮ್ಮಿಕೊಂಡಿದ್ದ ಪಾದಯಾತ್ರೆ ನಿಯೋಜನೆಗೊಂಡಂತ 32 ಪೊಲೀಸರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಪಾದಯಾತ್ರೆಯ ಬಂದೋಬಸ್ತ್ ಹಾಗಿ ಕೆಜಿಎಫ್ ನಿಂದ ತೆರಳಿದ್ದ 111 ಜನ ಪೊಲೀಸರ ಪೈಕಿ 25 ಜನ ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಇನ್ನೂ ಹಲವರ ವರದಿ ಬರಬೇಕಾಗಿದೆ.
ಕೋಲಾರ ಜಿಲ್ಲೆಯಿಂದ 49 ಪೊಲೀಸ್ ಸಿಬ್ಬಂದಿ ತೆರಳಿದ್ದರು. ಈ ಪೈಕಿ 7 ಮಂದಿ ಪೊಲೀಸ್ ಸಿಬ್ಬಂದಿಗೆ ಪಾಸಿಟಿವ್ ಧೃಡವಾಗಿದೆ. ಇದರಿಂದ ಮೇಕೆದಾಟು ಪಾದಯಾತ್ರೆ ಬಂದೋಬಸ್ತ್ ಗೆ ಹೋಗಿದ್ದ ಪೊಲೀಸರ ಕುಟುಂಬಸ್ಥರಲ್ಲಿಯೂ ಆತಂಕ ಹೆಚ್ಚಾಗಿದೆ.
ಮೇಕೆದಾಟು ಪಾದಯಾತ್ರೆಯನ್ನು ಹೈಕೋರ್ಟ್ ಗರಂ ಆದ ಕಾರಣದಿಂದಾಗಿ ಕಾಂಗ್ರೆಸ್ ಪಕ್ಷ ಐದೇ ದಿನಕ್ಕೆ ಕೊನೆಗೊಳಿಸಿ, ಮುಂದಿನ ದಿನಗಳಲ್ಲಿ ನಡೆಸಲಾಗುತ್ತದೆ ಎಂದು ಮುಂದೂಡಿಕೆ ಮಾಡಿತ್ತು.