ದೇಶದಲ್ಲಿ ಮತ್ತಷ್ಟು ಕೊರೋನಾ ಸೋಂಕು ಇಳಿಕೆ.

ನವದೆಹಲಿ,ಜೂನ್,21,2021(www.justkannada.in): ಹಲವು ರಾಜ್ಯಗಳು ಕೊರೊನಾ ತಡೆಗಟ್ಟಲು ಲಾಕ್ ಡೌನ್ ವಿಧಿಸಿದ್ದು ಈ ಹಿನ್ನೆಲೆಯಲ್ಲಿ  ದೇಶದಲ್ಲಿ ಕೊರೋನಾ ಸೋಂಕು ಕಡಿಮೆಯಾಗುತ್ತಿದೆ. ಈ ನಡುವೆ ಕಳೆದ 24 ಗಂಟೆಯಲ್ಲಿ 53,256 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದು ಕಳೆದ 88 ದಿನಗಳಲ್ಲೇ ಕನಿಷ್ಠ ಪ್ರಮಾಣದ್ದಾಗಿದೆ.jk

ಈ ಕುರಿತು  ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು,  ಒಂದೇ ದಿನದಲ್ಲಿ ದೇಶದಲ್ಲಿ 53,256 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿದ್ದು  ಆ ಮೂಲಕ ದೇಶದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 2,99,35,221ಕ್ಕೆ ಏರಿಕೆಯಾಗಿದೆ. ಅಂತೆಯೇ ಕಳೆದ 24 ಗಂಟೆಗಳಲ್ಲಿ  1,422 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು ಆ ಮೂಲಕ ಕೋವಿಡ್ ಸೋಂಕಿಗೆ ಬಲಿಯಾದವರ ಸಂಖ್ಯೆ 3,88,135ಕ್ಕೆ ಏರಿಕೆಯಾಗಿದೆ.

ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 78,190 ಮಂದಿ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ದೇಶದಲ್ಲಿ ಒಟ್ಟಾರೆ ಗುಣಮುಖರ ಸಂಖ್ಯೆ 2,88,44,199ಕ್ಕೆ ಏರಿಕೆಯಾಗಿದೆ. ಪ್ರಸ್ತುತ ದೇಶದಲ್ಲಿ 7,02,887 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ENGLISH SUMMARY….

COVID-19 Pandemic cases lowest in the last 88 days
New Delhi, June 21, 2021 (www.justkannada.in): Cases of COVID-19 Pandemic has come down noticeably across the country following imposition of lockdown in many States. As a result, 53,526 cases have been reported in the last 24 hours in the country, which is the minimum in the last 88 days.
The Union Ministry of Health and Welfare has provided information that the total number of infections has increased to 2,99,35,221. Whereas 1,422 people have lost their lives in the country in the last 24 hours increasing the tally to 3,88,135.
78,190 people have recovered in the last 24 hours increasing the tally to 2,88,44,199. Presently there are 7,02,887 active cases.
Keywords: COVID-19 Pandemic/ last 24 hours/ lowest

Key words: coronavirus -infection – country- Decrease.