ಮುಂಬೈ , ಏಪ್ರಿಲ್ 19, 2020 (www.justkannada.in): ಮಹಾರಾಷ್ಟ್ರದಲ್ಲಿ 8 ದಿನದ ಹಸುಗೂಸಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ.
ಪಾಲ್ಗಾರ್ ಜಿಲ್ಲೆಯ ವಾಸವಿ ವಿಹಾರಗ ಮುನ್ಸಿಪಲ್ ವ್ಯಾಪ್ತಿಯಲ್ಲಿ 8 ದಿನದ ಮಗುವಿಗೆ ಕೊರೋನಾ ಸೋಂಕು ತಗುಲಿದೆ. ಆದರೆ ಮಗುವಿನ ತಾಯಿಗೆ ಕೊರೋನಾ ಸೋಂಕು ಇರಲಿಲ್ಲ ಎಂಬುದನ್ನು ವೈದ್ಯರು ದೃಢಪಡಿಸಿದ್ದಾರೆ.
ಹಸುಗೂಸಿನಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ರಕ್ತದ ಮಾದರಿ ಹಾಗೂ ಗಂಟಲು ದ್ರವವನ್ನು ತಪಾಸಣೆಗೆ ಕಳುಹಿಸಲಾಗಿತ್ತು.
ಈ ವೇಳೆ, ವಿವಿಎಂಸಿಯ ಜಯಚಂದ್ರ ಮೆಡಿಕಲ್ನಲ್ಲಿ ಕೊರೋನಾ ಪಾಸಿಟಿವ್ ಪರೀಕ್ಷೆ ನಡೆಸಲಾಗಿದೆ. ಮಗುವಿನ ತಾಯಿಗೆ ಕೊರೋನಾ ನೆಗೆಟಿವ್ ಬಂದಿದೆ. ಮಗು ಹುಟ್ಟಿದ ಬಳಿಕ ಹಸುಗೂಸಿಗೆ ಕೊರೋನಾ ಇರುವುದು ಖಚಿತವಾಗಿದೆ.