ಬೆಂಗಳೂರು, ಜುಲೈ 08, 2020 (www.justkannada.in): ಗರ್ಭಿಣಿಗೆ ಕೊರೊನಾ ಸೋಂಕು ಹಿನ್ನಲಯಲ್ಲಿ ಹುಣಸೂರು ಸಾರ್ವಜನಿಕ ಆಸ್ಪತ್ರೆ ಸೀಲ್ಡೌನ್ ಮಾಡಲಾಗಿದೆ.
ಗರ್ಭಿಣಿಗೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಹುಣಸೂರಿನ ಆಜಾದ್ ನಗರದ ನಿವಾಸಿ ಗರ್ಭಿಣಿಗೆ ಸೋಂಕು ದೃಢಪಟ್ಟಿತ್ತು.
ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ. ಭಾನುವಾರ ಹೆರಿಗೆಯಾಗಿತ್ತು. ಹೆರಿಗೆ ನಂತರ ಕೊರೊನಾ ತಪಾಸಣೆ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ ಸಾರ್ವಜನಿಕ ಆಸ್ಪತ್ರೆ ಭಾಗಶಃ ಬಂದ್ ಮಾಡಲಾಗಿದೆ.
ತುರ್ತು ಚಿಕಿತ್ಸೆ ಹಾಗೂ ಡಯಾಲಿಸಿಸ್ ಗೆ ಮಾತ್ರ ಅವಕಾಶ. ಹುಣಸೂರು ಜನತೆಗೆ ಹೆಚ್ಚಿದ ಆತಂಕ. ಆಸ್ಪತ್ರೆಗೆ ಹೋಗಿಬಂದವರಲ್ಲಿ ಕೊರೊನಾ ಭೀತಿ ಎದುರಾಗಿದೆ.