ಕೋಲ್ಕತ್ತಾ, ಜೂನ್ 20, 2020 (www.justkannada.in): ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ನ ಕಾರ್ಯದರ್ಶಿ ಸ್ನೇಹಶಿಶ್ ಗಂಗೂಲಿ ಅವರ ಕುಟುಂಬದ ಸದಸ್ಯರೊಬ್ಬರಿಗೆ ಕೋವಿಡ್ 19 ಪಾಸಿಟಿವ್ ವರದಿ ಬಂದಿದೆ.
ಈ ಕುರಿತು ರಾಜ್ಯ ಆರೋಗ್ಯ ಇಲಾಖೆ ದೃಢಪಡಿಸಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಣ್ಣ ಸ್ನೇಹಶಿಶ್ ಅವರ ಪತ್ನಿಗೆ ಕೋವಿಡ್ 19 ಸೋಕು ಹರಡಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.
ಸ್ನೇಹಶೀಷ್ ಪತ್ನಿಗೂ ಮುನ್ನ ಕಳೆದ ವಾರ ಅವರ ಅತ್ತೆ ಮತ್ತ ಮಾವ ಇಬ್ಬರ ವರದಿ ಕೂಡ ಪಾಸಿಟಿವ್ ಬಂದಿತ್ತು ಎಂದು ಅವರು ತಿಳಿಸಿದ್ದಾರೆ. ಇದರ ಜೊತೆಗೆ ಸ್ನೇಹಶೀಷ್ರ ಮೊಮಿನ್ಪುರದ ನಿವಾಸದಲ್ಲಿ ವಾಸಿಸುತ್ತಿದ್ದ ಮನೆಯ ಕೆಲಸದವರಿಗೂ ಕೊವೀಡ್ ಪಾಸಿಟಿವ್ ವರದಿ ಬಂದಿದೆ.