ಬೆಂಗಳೂರು,ಮಾ,21,2020(www.justkannada.in): ರಾಜ್ಯದಲ್ಲಿ ಕೊರೋನಾ ವೈರಸ್ ಹರಡುವ ಭೀತಿ ಹೆಚ್ಚಾದ ಹಿನ್ನೆಲೆ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನವನ್ನು ತಕ್ಷಣವೇ ಮುಂದೂಡಬೇಕೆಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸ್ವಯಂ ನಿರ್ಬಂಧಗಳನ್ನು ಪಾಲಿಸುವಂತೆ ಜನತೆಗೆ ಹೇಳುತ್ತಿರುವ ಸರ್ಕಾರ ತಕ್ಷಣವೇ ವಿಧಾನಮಂಡಲ ಅಧಿವೇಶನವನ್ನು ಮುಂದೂಡಬೇಕು ಎಂದಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ, ನೂರಾರು ಮಂದಿ ಒಂದೆಡೆ ಸೇರಬಾರದು ಎಂದು ತಾಕೀತು ಮಾಡುವ ಸರ್ಕಾರ ನೂರಾರು ಜನ ಪ್ರತಿನಿಧಿಗಳು, ಅಧಿಕಾರಿಗಳು, ಪತ್ರಕರ್ತರು ಹಾಗೂ ಜನರು ಜಮಾಯಿಸುವ ಅಧಿವೇಶನ ನಡೆಸುವುದು ವಾಸ್ತವ ಪರಿಸ್ಥಿತಿಯಲ್ಲಿ ಸರಿಯಲ್ಲ ಎಂದು ರಾಜ್ಯ ಸರ್ಕಾರವನ್ನ ಮಾಜಿ ಸಿಎಂ ಹೆಚ್.ಡಿಕೆ ಕುಟುಕಿದ್ದಾರೆ
ಹಾಗೆಯೇ ಜನರಿಗೆ ಒಂದು ನಮಗೆ ಒಂದು ನಿಯಮ ಬೇಡ. ಸರಕಾರ ಹೇಳುವುದು ಒಂದು ಮಾಡುವುದೊಂದು ಎಂದು ಸಾರ್ವಜನಿಕರು ಜಿಜ್ಞಾಸೆಗೆ ಒಳಗಾಗುವುದು ಬೇಡ. ಸರಕಾರ ತಕ್ಷಣವೇ ಎಚ್ಚೆತ್ತು ವಿಧಾನಮಂಡಲ ಅಧಿವೇಶನವನ್ನು ಮುಂದೂಡಬೇಕು ಎಂದು ಒತ್ತಾಯಿಸುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
Key words: coronavirus virus-Former CM- HD Kumaraswamy-demands -postponement – Sessions.