ಬೆಂಗಳೂರು,ನವೆಂಬರ್,30,2023(www.justkannada.in): ನಿಗಮ ಮಂಡಳಿ ಅಧ್ಯಕ್ಷ ನೇಮಕಕ್ಕೆ ಸಂಬಂಧಿಸಿದಂತೆ ಮೊದಲಬಾರಿ ಆಯ್ಕೆಯಾಗಿರುವ ಶಾಸಕರಿಗೆ ಸ್ಥಾನವಿಲ್ಲ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅಧ್ಯಕ್ಷರು ಯಾವ ಪದ್ದತಿ ಮಾನದಂಡ ಅನುಸರಿಸಿದ್ದಾರೆ ಗೊತ್ತಿಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್. ಡಿಕೆ ಶಿವಕುಮಾರ್ ನಮ್ಮ ಅಧ್ಯಕ್ಷರು. ಅದು ಅವರ ತೀರ್ಮಾನ. ಮೊದಲ ಬಾರಿಗೆ ಆಯ್ಕೆಯಾದವರಿಗೆ ನಿಗಮ ಮಂಡಳಿ ಸ್ಥಾನವಿಲ್ಲ ಎಂದಿದ್ದಾರೆ. ಅಧ್ಯಕ್ಷರು ಯಾವ ಪದ್ದತಿ ಮಾನದಂಡ ಅನುಸರಿಸುತ್ತಿದ್ದಾರೆ ಎಂದು ಗೊತ್ತಿಲ್ಲ. ಹೊಸಬರಿಗೆ ಯಾಕೆ ಇಲ್ಲವೆಂದು ಡಿಕೆ ಶಿವಕುಮಾರ್ ರಿಗೆ ಕೇಳಬೇಕು ಎಂದರು.
ಡಿಕೆ ಶಿವಕುಮಾರ್ ಗೆ ಹೈಕೋರ್ಟ್ ನಿಂದ ತಾತ್ಕಾಲಿಕ ರಿಲೀಫ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ಹಿಂದಿನ ಬಿಜೆಪಿ ಸರ್ಕಾರ ಅನುಮತಿ ಇಲ್ಲದೆ ಸಿಬಿಐ ತನಿಖೆ ನೀಡಿತ್ತು. ಈ ಆದೇಶವನ್ನ ನಾವು ಈಗ ವಾಪಸ್ ಪಡೆದಿದ್ದೇವೆ. ಇದನ್ನು ಕೋರ್ಟ್ ಗಮನಕ್ಕೆ ತಂದಿದ್ದು ಕೋರ್ಟ್ ಒಪ್ಪಿಕೊಂಡಿದೆ. ಮುಂದಿನ ಸಿಬಿಐ ಪ್ರಕ್ರಿಯೆ ಏನೆಂಬುದು ಗೊತ್ತಿಲ್ಲ. ಈ ಸಂದರ್ಭದಲ್ಲಿ. ನಾವು ಮಧ್ಯ ಪ್ರವೇಶ ಮಾಡಲು ಆಗಲ್ಲ ಎಂದು ಹೇಳಿದರು.
Key words: Corporation Board- appointment-DK Shivakumar – Home Minister- Dr. G. Parameshwar.