ಬೆಂಗಳೂರು, ಆಗಸ್ಟ್, 18,2020(www.justkannada.in): ಕಾಡುಗೊಂಡನಹಳ್ಳಿ(ಕೆ.ಜಿ.ಹಳ್ಳಿ) ಮತ್ತು ದೇವರ ಜೀವನಹಳ್ಳಿ(ಡಿ.ಜಿ.ಹಳ್ಳಿ) ಯಲ್ಲಿ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ವಿಭಾಗ ಪೊಲೀಸರು ಬಿಬಿಎಂಪಿ ಸದಸ್ಯರಾದ ಸಂಪತ್ ರಾಜ್, ಜಾಕೀರ್ ಹುಸೇನ್ ಗಳನ್ನು ವಿಚಾರಣೆಗೆ ಒಳಪಡಿಸಿದರು.
ಸಿಸಿಬಿ ಪೊಲೀಸರು ನೋಟಿಸ್ ನೀಡಿದ ಹಿನ್ನೆಲೆ ಕಾರ್ಪೋರೇಟರ್ಸ್ ಸಂಪತ್ ರಾಜ್ ಮತ್ತು ಜಾಕೀರ್ ಹುಸೇನ್ ಬೆಳಗ್ಗೆ 10.30ಕ್ಕೆ ಸಿಸಿಬಿ ಕಚೇರಿಗೆ ವಿಚಾರಣೆಗಾಗಿ ಹಾಜರಾಗಿ ಸಂಜೆ ಐದು ಗಂಟೆವರೆಗೂ ಇಬ್ಬರನ್ನು ತೀವ್ರ ವಿಚಾರಣೆಗೊಳಪಡಿಸಲಾಯಿತು.
ಸಿಸಿಬಿ ವಿಚಾರಣೆ ಬಳಿಕ ಪ್ರತಿಕ್ರಿಯೆ ನೀಡಿದ ಇಬ್ಬರು ಬಿಬಿಎಂಪಿ ಸದಸ್ಯರು, ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಸಿಸಿಬಿ ಪೊಲೀಸರು ನೋಟಿಸ್ ನೀಡಿದಕ್ಕೆ ವಿಚಾರಣೆಗೆ ಹಾಜರಾಗಿದ್ದೆವು. ಮತ್ತೆ ವಿಚಾರಣೆಗೆ ಕರೆದರೆ ಬರುತ್ತೇವೆಯಷ್ಟೇ ಎಂದು ಹೇಳಿದರು.
ಇಬ್ಬರ ಫೋನ್ ಗಳನ್ನು ಸಿಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಮತ್ತೊಮ್ಮೆ ತನಿಖೆಗೆ ಒಳಪಡಸುವ ಸಾಧ್ಯತೆಯಿದೆ.
key words: Corporator -Sampath Raj- Zaheer – first stage -Inquiry