ನವದೆಹಲಿ,ಜೂನ್,23,2023(www.justkannada.in): ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಹೆಚ್ಚುವರಿ ಅಕ್ಕಿ ನೀಡಲು ಆಗಲ್ಲ ಎಂದಿದ್ದಾರೆ. ಸ್ಟಾಕ್ ಇದ್ರೂ ಅಕ್ಕಿ ಕೊಡಲ್ಲ ಎನ್ನುವುದು ಎಷ್ಟು ಸರಿ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಇಂದು ನವದೆಹಲಿಯಲ್ಲಿ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಭೇಟಿ ಮಾಡಿದ ಸಚಿವ ಕೆ.ಎಚ್ ,ಮುನಿಯಪ್ಪ, ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ಪೂರೈಕೆ ಮಾಡುವಂತೆ ಮನವಿ ಮಾಡಿದರು.
ಕೇಂದ್ರ ಸಚಿವರ ಭೇಟಿ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ. ಹಣ ಕೊಡ್ತೀವಿ ಅಕ್ಕಿ ಪೂರೈಸಿ ಎಂದು ಕೇಳಿದೆ. ಆದರೆ ಅಕ್ಕಿ ಕೊಡಲು ಆಗುವುದಿಲ್ಲ ಎಂದು ಪಿಯೂಷ್ ಗೋಯೆಲ್ ಹೇಳಿದ್ದಾರೆ ಭೇಟಿ ವೇಳೆ ಹಾರಿಕೆಯ ಉತ್ತರ ನೀಡಿದ್ದಾರೆ. ಅಕ್ಕಿ ವಿಚಾರದಲ್ಲಿ ಕೇಂದ್ರ ರಾಜಕೀಯ ಮಾಡುತ್ತಿದೆ. ಸ್ಟಾಕ್ ಇರುವ ಅಕ್ಕಿ ಬೇರೆ ಯೋಜನೆಗಳಿಗೆ ಬೇಕು ಅಕ್ಕಿ ಕೊಡಲ್ಲ ಎಂದ್ರು. ಸ್ಟಾಕ್ ಇದ್ರೂ ಅಕ್ಕಿ ಕೊಡಲ್ಲ ಎನ್ನುವುದು ಎಷ್ಟು ಸರಿ. ಗೋಯೆಲ್ ಉತ್ತರದಿಂದ ಬೇಸರವಾಗಿದೆ ಎಂದರು.
ನಮ್ಮ ಪ್ಲಾನ್ ನಾವು ಮಾಡಿದ್ದೇವೆ . ಏಜೆನ್ಸಿ ಮೂಲಕ ಅಕ್ಕಿ ಕೊಂಡುಕೊಳ್ಳುವ ಕೆಲಸ ಮಾಡುತ್ತಿದ್ದೇವೆ. ನಾವು ಹೇಳಿದಂತೆ ಅನ್ನಭಾಗ್ಯ ಯೋಜನೆ ಜಾರಿ ಮಾಡೇ ಮಾಡುತ್ತೇವೆ. ಅಗಸ್ಟ್ ತಿಂಗಳಲ್ಲಿ 10 ಕೆಜಿ ಅಕ್ಕಿ ವಿತರಣೆ ಮಾಡುತ್ತೇವೆ ಎಂದು ಕೆ.ಎಚ್ ಮುನಿಯಪ್ಪ ತಿಳಿಸಿದರು.
Key words: correct – not give- rice -Minister -KH Muniyappa – Union Minister -Piyush Goyal