ಬೆಂಗಳೂರು,ಜುಲೈ,16,2022(www.justkannada.in): ಸರ್ಕಾರಿ ಕಚೇರಿಗಳಲ್ಲಿ ಫೋಟೋ ವಿಡಿಯೋ ಚಿತ್ರೀಕರಣ ನಿಷೇಧ ವಿಧಿಸಿ ನಂತರ ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾದ ನಂತರ ಆದೇಶ ವಾಪಸ್ ಪಡೆದ ರಾಜ್ಯ ಸರ್ಕಾರದ ನಡೆ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ ವ್ಯಂಗ್ಯವಾಡಿದೆ.
ಈ ಕುರಿತು ಟ್ವಿಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಭ್ರಷ್ಟ ರಕ್ಷಕ ಸರ್ಕಾರಕ್ಕೆ ರಾತ್ರೋರಾತ್ರಿ ಯೂಟರ್ನ್ ಹೊಡೆಯುವಂತೆ ಚಾಟಿಯೇಟು ಬಿದ್ದಿದೆ. ಸಾರ್ವಜನಿಕ ಟೀಕೆ, ವಿಪಕ್ಷಗಳ ವಿರೋಧವೇ ಬರಬೇಕಾ ಭ್ರಷ್ಟ ಬಿಜೆಪಿ ಸರ್ಕಾರ ಬುದ್ದಿ ಕಲಿಯಲು? ಎಂದು ಕಿಡಿಕಾರಿದೆ.
ಹಾಗೆಯೇ ಚಿತ್ರೀಕರಣ ನಿಷೇಧ ವಾಪಸ್ ಆದೇಶದಲ್ಲಿ ಕನ್ನಡ ಅಕ್ಷರಗಳ ದೋಷಗಳು ಕಂಡು ಬಂದಿದ್ದು ಈ ಕುರಿತು ಲೇವಡಿ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರ “ಮದ್ಯ’ ರಾತ್ರಿ” ಕೆಲಸಗಳನ್ನು ನಿಲ್ಲಿಸಬೇಕು & ಹಿಂದಿ ಪ್ರೇಮದ ಉತ್ತುಂಗದಲ್ಲಿ ಕನ್ನಡದ ಕೊಲೆ ನಿಲ್ಲಿಸಬೇಕೆಂಬುದು ನಮ್ಮ ಸಲಹೆ! ಎಂದು ಹೇಳಿದರು.
ನಾಗಪುರದ ಆಡಳಿತದಲ್ಲಿ ನೀವು ನಾಮಕಾವಸ್ತೆ ಸಿಎಂ ಮಾತ್ರಾನಾ?
ಇನ್ನು ಹಾಗೆಯೇ ಆದೇಶದ ಬಗ್ಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ಧ ಸಿಎಂ ಬೊಮ್ಮಾಯಿಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಸಿಎಂ ಬೊಮ್ಮಾಯಿ ಅವರೇ, ರಾಜ್ಯದಲ್ಲಿ ನಿಮ್ಮ ಗಮನಕ್ಕಿಲ್ಲದೆ ಆಡಳಿತ ನಡೆಯುತ್ತಿದೆಯೇ? . ಹಾಗಿದ್ದರೆ ಆ ‘ಆಡಳಿತ’ ನಡೆಸುತ್ತಿರುವವರು ಯಾರು? . ನೀವು ಕೇವಲ ಉತ್ಸವಮೂರ್ತಿ ಮಾತ್ರಾನಾ? ಅಧಿಕಾರಿಗಳು, ಮಂತ್ರಿಗಳು ನಿಮ್ಮನ್ನ ಕಡೆಗಣಿಸಿದ್ದಾರಾ? . ಸರ್ಕಾರದಲ್ಲಿ ನಿಮಗೆ ಹಿಡಿತ ಇಲ್ಲವೇ? ನಾಗಪುರದ ಆಡಳಿತದಲ್ಲಿ ನೀವು ನಾಮಕಾವಸ್ತೆ ಸಿಎಂ ಮಾತ್ರಾನಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
Key words: corrupt – government – u turn – State -Congress
ENGLISH SUMMARY..
The corrupt govt. has taken a U-turn after getting thrashing”: Cong. ridicules
Bengaluru, July 16, 2022 (www.justkannada.in): Following severe criticism by the people against the State Govt. orders prohibiting visitors from taking pictures and videos in government offices, the State Govt. today withdrew the order. The State Congress leaders have ridiculed the government’s move.
In a tweet by the State Cong. unit, “The corrupt government has taken a U-turn soon after getting a thrashing from the public. The BJP govt. appears to mend its ways only through rival party’s opposition and public furor.”
Keywords: Corrupt BJP govt/ State Cong/ ridicules