ಹಾವೇರಿ,ಆ,3,2020(www.justkannada.in): ಕೊರೋನಾ ಅನುದಾನದಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಲೂಟಿ ಮಾಡಿದ್ದಾರೆ. ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಬೇಕು ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಆಗ್ರಹಿಸಿದರು.
ಹಾವೇರಿಯಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಎಂ.ಬಿ ಪಾಟೀಲ್, ಹೆಮ್ಮಾರಿ ಕೊರೋನಾದಿಂದ ಇಡೀ ವಿಶ್ವ ತಲ್ಲಣಗೊಂಡಿದೆ. ಆದರೆ ಕರ್ನಾಟಕ ಸರಕಾರಕ್ಕೆ ಇದು ಕಲ್ಪವೃಕ್ಷ, ಕಾಮದೇನು, ದೊಡ್ಡ ಜಾತ್ರೆ, ಹಬ್ಬವಾಗಿದೆ. ಏಕೆಂದ್ರೆ ಇದು ಭಷ್ಟಾಚಾರ ಬಿಜೆಪಿ ಸರಕಾರದ ಸಂಸ್ಕಾರ. ಸಚಿವರು, ಅಧಿಕಾರಿಗಳು ಇದೊಂದು ಅವಕಾಶವೆಂದು ಲೂಟಿ ಹೊಡೆಯಲು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಕೊರೋನಾ ಸಂಕಷ್ಟ ಕಾಲದಲ್ಲಿ ಎಲ್ಲರು ಸಹಾಯ ಮಾಡಿದ್ದಾರೆ. ಆದರೆ ಇವರು ಏನು ಮಾಡುತ್ತಿದ್ದಾರೆ. ಅಧಿಕೃತ ಮಾಹಿತಿ ಪ್ರಕಾರ ಆರೋಗ್ಯ ಇಲಾಖೆ ಏಳುನೂರು ಕೋಟಿ. ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಎರಡುನೂರು ಕೋಟಿ. ಒಟ್ಟಾರೆ 4167 ಕೋಟಿ ರೂಪಾಯಿ ಬಳಸಿದ್ದಾರೆ. ಇದರಲ್ಲಿ ಅರ್ದದಷ್ಟು ಹಣವನ್ನು ಮಂತ್ರಿಗಳು, ಅಧಿಕಾರಿಗಳು ಲೂಟಿ ಹೊಡೆದಿದ್ದಾರೆ. ಇದಕ್ಕೆ ನಮ್ಮ ಬಳಿ ಮಾಹಿತಿ, ದಾಖಲೆ ಇದೆ. ಅತ್ಯಂತ ಕೆಟ್ಟದಾದ ಕೆಲಸವನ್ನ ಬಿಜೆಪಿ ಸರಕಾರ ಮಾಡಿದೆ. ವೆಂಟಿಲೇಟರ್ಸ್ ಗಳು ಕಳಪೆ ಗುಣಮಟ್ಟದವು. ಇವು ಉಪಯೋಗಿಸಿದ ಮುರಿದ ಸೆಕೆಂಡ್ ಹ್ಯಾಂಡ್ ಗಳು. ಯಾವುದಕ್ಕೂ ಅಗತ್ಯ ದಾಖಲಾತಿಗಳಿಲ್ಲ ಕಳಪೆ ಮಟ್ಟದ ಪಿಪಿಇ ಕಿಟ್ ನ್ನು ವೈದ್ಯರು, ಆರೋಗ್ಯ ಸಿಬ್ಬಂದಿಗೆ ನೀಡಿದ್ದಾರೆ.ಇದು ದುಡ್ಡು ಹೊಡಿಯುವುದರ ಜೊತೆ, ಕ್ರಿಮಿನಲ್ ಅಪರಾಧವಾಗಿದೆ ಎಂದು ಆರೋಪಿಸಿದರು.
ನಮಗೂ ನೋಟಿಸ್ ಕೊಡಿ ನಾನು ಉತ್ತರ ಕೊಡುತ್ತೇನೆ- ಸವಾಲು..
ಹಾಗೆಯೇ ಕೊರೋನಾ ಅನುದಾನದಲ್ಲಿ ಸರ್ಕಾರದಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಲೂಟಿ ಮಾಡಿದ್ದಾರೆ. ಸಿಎಂ, ಸಚಿವರು ಅಧಿಕಾರಿಗಳು ಈ ಲೂಟಿ ಮಾಡಿದ್ದಾರೆ. ನಮಗೂ ನೋಟಿಸ್ ಕೊಡಿ ನಾನು ಉತ್ತರ ಕೊಡುತ್ತೇನೆ ಎಂದು ಬಿಜೆಪಿ ಸರಕಾರಕ್ಕೆ ಶಾಸಕ ಎಂ ಬಿ ಪಾಟೀಲ್ ಸವಾಲು ಹಾಕಿದರು.
ಸರಕಾರದಿಂದ ನೀಡಿದ ಆಹಾರ ಕಿಟ್ ಮೇಲೆ ತಮ್ಮ ಹೆಸರು, ಸ್ಟಿಕರ್ ಹಚ್ಚಿದರು. ಅದು ಸ್ವಂತದ್ದಾಗಿದ್ದರೆ ಹೆಸರು ಹಾಕಲಿ, ಆದರೆ ಅದು ಸರಕಾರದ್ದು. ಆಹಾರ ಕಿಟ್ ಕಾರ್ಮಿಕರರಿಗೆ ನೀಡಿಲ್ಲ. ತಮ್ಮ ಓಟರ್ಸ್, ಕಾರ್ಯಕರ್ತರಿಗೆ ಕೊಟ್ಟಿದ್ದಾರೆ. ನೋಟ್ ಬ್ಯಾನ್ ಮಾಡಿದ ರೀತಿ, ಲಾಕ್ ಡೌನ್ ಮಾಡಿದರು. ಭಾಷಣ ಮಾಡಿ, ದಿಢೀರ್ ಲಾಕ್ ಡೌನ್ ಘೋಷಣೆ ಮಾಡಿದರು. ಇದು ಕೇಂದ್ರ ಸರಕಾರ ಮಾಡಿದ ದೊಡ್ಡ ತಪ್ಪು, ಜನರ ಜೀವನ ಜೊತೆ ಆಟವಾಡಿದರು. 18 ದಿನದಲ್ಲಿ ಮಹಾ ಭಾರತ ಮುಗಿಯಿತು. 21 ದಿನದಲ್ಲಿ ಕರೊನಾ ಮುಕ್ತ ಮಾಡ್ತಿವಿ ಎಂದರು.ಮಾಡಿದ್ರಾ ಇವರು, ಎಲ್ಲಾ ಪ್ರಚಾರಕ್ಕಾಗಿ ಮಾತನಾಡುತ್ತಾರೆ. ಕೇಂದ್ರ, ರಾಜ್ಯ ಸರಕಾರ ಕರೊನಾ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಎಂಬಿ ಪಾಟೀಲ್ ವಾಗ್ದಾಳಿ ನಡೆಸಿದರು.
ಕರೊನಾ ಅನುದಾನಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಬೇಕು. ನಿವೃತ್ತ ನ್ಯಾಯಾಧೀಶರು ಬೇಡ ಅವರು ಮುಚ್ಚಿ ಹಾಕಿ ಬಿಡ್ತಾರೆ. ಈ ಬಗ್ಗೆ ಸರಕಾರ ಬಿಳಿಹಾಳೆಯಲ್ಲಿ ಶ್ವೇತ ಪತ್ರ ಹೊರಡಿಸಬೇಕು. ತಪ್ಪು ಮಾಡಿದ ಸಚಿವ, ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮವಾಗಲಿ. ಎಷ್ಟೇ ದೊಡ್ಡವರಿದ್ದರು ಈ ಅಮಾನವೀಯ, ಆರೋಗ್ಯ ಗಡಾಂತರದಲ್ಲಿ ಲೂಟಿ ಮಾಡಿದ್ದಾರೆ. ಇವರನ್ನು ಜೈಲಿಗೆ ಹಾಕಬೇಕು ಎಂದು ಎಂಬಿ ಪಾಟೀಲ್ ಒತ್ತಾಯಿಸಿದರು.
Key words: Corruption – Corona –government- Former minister -M B Patil-haveri