ಮೈಸೂರು ಮುಡಾದಲ್ಲಿ ನೂರಾರು ಕೋಟಿ ಭ್ರಷ್ಟಾಚಾರ: ಕೆ.ಎಸ್.ಶಿವರಾಂ ಆರೋಪ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್. ಶಿವರಾಂ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರಿಗೆ ಪರಿಹಾರ, ಕಾಮಗಾರಿಯಲ್ಲಿ ಅಧಿಕಾರಿಗಳು ಹಣ ನುಂಗಿದ್ದಾರೆ. ಭ್ರಷ್ಟಾಚಾರದಲ್ಲಿ ಆಯುಕ್ತ.ಡಾ. ಡಿ.ಬಿ. ನಟೇಶ್ ನೇರ ಪಾಲುದಾರರಾಗಿದ್ದಾರೆ. ಹೀಗಾಗಿ ಆಯುಕ್ತ ನಟೇಶ್ ಅಮಾನತಿಗೆ ಶಿವರಾಂ ಒತ್ತಾಯಿಸಿದ್ದಾರೆ.

ಮುಡಾ ಭ್ರಷ್ಟಾಚಾರವನ್ನ ಸಿಬಿಐ ತನಿಖೆಗೆ ಒಪ್ಪಿಸಬೇಕು. ಇದಕ್ಕಾಗಿ ಜುಲೈ 5 ರಂದು  ಮೂಡಾ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಆಯುಕ್ತರ ನಿರ್ಲಕ್ಷ್ಯ ದಿಂದ  ಸರ್ಕಾರ ಮುಡಾ ಬಜೆಟ್‌ ತಿರಸ್ಕರಿಸಿದೆ. 12096 ಕೋಟಿ ಪರಿಹಾರ ಹಣ ರೈತರಿಗೆ ಬಾಕಿ ಉಳಿಸಿಕೊಂಡಿದೆ. 674 ಕೋಟಿ ಬಜೆಟ್ ಮಂಡಿಸಿದೆ. ಬಜೆಟ್ ಮಂಡನೆಯಲ್ಲಿ ಬಾರಿ ಅಸಮತೋಲನ ಇದೆ.

ಮುಡಾ ತನ್ನ ವ್ಯಾಪ್ತಿ ಮೀರಿ ಕೆಲಸ ಮಾಡಿದೆ. ಮುಡಾ ಬ್ರಹ್ಮಾಂಡ ಭ್ರಷ್ಟಾಚಾರದ ಕೂಪವಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ. ಸರ್ಕಾರ ನಿರ್ಲಕ್ಷ್ಯ ವಹಿಸದರೆ ಮೂಡಾ ಉಳಿಸಿ ಹೋರಾಟ ನಡೆಸುತ್ತೆವೆ ಎಂದು ಕೆ.ಎಸ್. ಶಿವರಾಂ ಹೇಳಿದ್ದಾರೆ.