ಹಾಸನ ಡಿಸೆಂಬರ್,14,2021(www.justkannada.in): ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ನ 25 ಸ್ಥಾನಗಳೀಗೆ ನಡೆದ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು ಹಾಸನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮತ್ತೆ ಹಿಡಿತ ಸಾಧಿಸಿದೆ.
ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ನ ಅಭ್ಯರ್ಥಿ ಡಾ.ಸೂರಜ್ ರೇವಣ್ಣ ಅವರು 2,242 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ನ ಅಭ್ಯರ್ಥಿ ಎಂ ಶಂಕರ್ 731 ಮತಗಳನ್ನು ಪಡೆದರೇ, ಬಿಜೆಪಿಯ ಹೆಚ್ ಎಂ ವಿಶ್ವನಾಥ್ ಅವರು 354 ಮತಗಳನ್ನು ಗಳಿಸಿದ್ದಾರೆ.
ಒಂದು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ. ಈ ಮೂಲಕ ಮೊದಲ ಅಗ್ನಿಪರೀಕ್ಷೆಯಲ್ಲೇ ಸೂರಜ್ ರೇವಣ್ಣಗೆ ಅದೃಷ್ಟ ಖುಲಾಯಿಸಿದ್ದು, ವಿಜಯದ ಸರಮಾಲೆ ಧರಿಸಿದ್ದಾರೆ.
ENGLISH SUMMARY…
MLC election: JDS candidate Sooraj Revanna registers huge win in Hassan
Hassan, December 14, 2021 (www.justkannada.in): Counting of votes in the legislative council elections for 25 constituencies are being held, and results of several constituencies have already been announced. Former Prime Minister H.D. Devegowda appears to be gaining popularity once again in Hassan.
JDS candidate Sooraj Revanna has registered a comfortable win with more than 1,000 votes. While he secured 2242 votes, Congress candidate M. Shankar secured 731 votes, followed by BJP’s candidate H.M. Vishwanath with 354 votes.
Keywords: MLC election/ JDS/ Sooraj Revanna wins/ Hassan
Key words: Council elections- JDS candidate -Suraj Revanna- won- Hassan