ಮೈಸೂರು, ಮೇ.13, 2024: (www.justkannada.in news) ತೆನೆ,ಕಮಲದ ನಡುವೆ ಲೋಕಸಭಾ ಅಖಾಡದಲ್ಲಿ ಗೊಂದಲವಾಗಿದ್ದ ಸೀಟು ಹಂಚಿಕೆ ವಿಚಾರ ಇದೀಗ ವಿಧಾನ ಪರಿಷತ್ ಚುನಾವಣಾ ಸೀಟು ಹಂಚಿಕೆಗೂ ವ್ಯಾಪಿಸಿದೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಗೊಂಡಿದ್ದು, ಯಾವುದೇ ಗೊಂದಲಕ್ಕೂ ಆಸ್ಪಧ ನೀಡಿಲ್ಲ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಕಾರ್ಯವನ್ನು ಆರಂಭಿಸಿದ್ದಾರೆ. ಆದರೆ ಮೈತ್ರಿ ಪಕ್ಷಗಳಾದ ಬಿಜೆಪಿ- ಜೆಡಿಎಸ್ ನಲ್ಲಿ ಪರಿಸ್ಥಿತಿ ಗೊಂದಲದ ಗೂಡಾಗಿದೆ.
ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಒಮ್ಮತ ಮೂಡಿಲ್ಲ. ಕಮಲ ಅಭ್ಯರ್ಥಿ ಘೋಷಣೆ ಮಾಡಿದ ಬೆನ್ನಲ್ಲೇ ಜೆಡಿಎಸ್ ತಗಾದೆ ತೆಗೆದಿದೆ. ಮೈತ್ರಿ ಒಪ್ಪಂದದಂತೆ ನಮ್ಮವ್ರೆ ಕ್ಯಾಂಡಿಡೇಟ್ ಪೈನಲ್ ಅಂತಿದ್ದಾರೆ ದಳಪತಿಗಳು.
ಬಿಜೆಪಿ- ಜೆಡಿಎಸ್ ನಡುವೆ ಕಗ್ಗಂಟಾದ ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ವಿಚಾರ. ಬಿಜೆಪಿಯಿಂದ ಡಾ.ನಿಂಗರಾಜೇಗೌಡ ಅವರಿಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೆ ಜೆಡಿಎಸ್ ನಿಂದ ಟಿಕೆಟ್ ಗೆ ಡಿಮ್ಯಾಂಡ್. ರಾಜ್ಯದಲ್ಲಿ ಜೂನ್.3 ರಂದು ನಡೆಯಲಿರೊ ದಕ್ಷಿಣ, ವಾಯುವ್ಯ, ಈಶಾನ್ಯ ಸೇರಿದಂತೆ 6 ಕ್ಷೇತ್ರಗಳ ಪದವಿದರರ,ಶಿಕ್ಷಕರ ಕ್ಷೇತ್ರಗಳ ಪೈಕಿ ಈಗಾಗಲೇ ಬಿಜೆಪಿ 5 ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಯನ್ನ ಘೋಷಣೆ ಮಾಡಿದೆ. ಆದರೆ ಜೆಡಿಎಸ್ ಮಾತ್ರ ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ನಮಗೆ ಬೇಕು ಅಂತಾ ಈಗ ಬೇಡಿಕೆ ಮುಂದಿಟ್ಟಿದೆ.
ಮೇ.15 ಕ್ಕೆ ಜೆಡಿಎಸ್ ಗೆ ದಕ್ಷಿಣ ಶಿಕ್ಷಕರ ಜೆಡಿಎಸ್ ಅಭ್ಯರ್ಥಿ ಫೈನಲ್. ಕೆ.ಟಿ.ಶ್ರೀಕಂಠೇಗೌಡ ಅಥವಾ ವಿವೇಕಾನಂದ ನಡುವೆ ಫೈಪೋಟಿ ಇದ್ದು ಶೀಘ್ರವೇ ಅಭ್ಯರ್ಥಿ ಹೆಸರು ಅಂತಿಮವಾಗಲಿದೆ. ಜೆಡಿಎಸ್ ಗೆ ಈ ಕ್ಷೇತ್ರ ಬಿಟ್ಟುಕೊಡೋದಾಗಿ ಬಿಜೆಪಿ ಹೈಕಮಾಂಡ್ ಈ ಮೊದಲೇ ಸಮ್ಮತಿ ಸೂಚಿಸಿದ್ದರು.ಹಾಗಾಗಿ ಮಾತು ಉಳಿಸಿಕೊಳ್ಳಲಿದ್ದಾರೆ ಎಂದು ಮಾಜಿ ಶಾಸಕ ಸಾರಾ ಮಹೇಶ್ ವಿಶ್ವಾಸ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಾಲಿ ಅಧಿಕೃತ ಬಿಜೆಪಿ ಅಭ್ಯರ್ಥಿ ಡಾ.ಈ .ಸಿ . ನಿಂಗರಾಜೇಗೌಡ, ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಮಹಿಳಾ ಶಿಕ್ಷಕ ಮತದಾರರ ಮೇಲೆ ಎಫೆಕ್ಟ್ ಬೀರಲಿದೆ. ಬೆಂಗಳೂರಿನಲ್ಲಿ ಸಿಟ್ಟಿಂಗ್ ಎಂಎಲ್ಸಿ ಪುಟ್ಟಣ್ಣ ಅವ್ರ ಸೀಟ್ ಕೂಡ ಜೆಡಿಎಸ್ ಗೆ ಮೊದಲು ಬಿಟ್ಟುಕೊಡಲಾಗಿತ್ತು. ಈಗ ಜೆಡಿಎಸ್ ಒಕ್ಕಲಿಗ ಸಮಾಜದ ನನಗೆ ಬೆಂಬಲ ಕೊಡುತ್ತೆ ಅಂತಾ ನಂಬಿದ್ದೇನೆ. ಹೆಸರು ಘೋಷಣೆಯಾದ ಬಳಿಕ ಕ್ಯಾನ್ಸಲ್ ಮಾಡಿದ ಇತಿಹಾಸ ಬಿಜೆಪಿ ಪಕ್ಷದಲ್ಲಿ ಇಲ್ಲ. ಬದಲಾವಣೆ ಮಾಡಿದ್ರೆ ಎರಡೂ ಪಕ್ಷಕ್ಕೂ ವ್ಯತಿರಿಕ್ತ ಪರಿಣಾಮ ಎದುರಾಗುತ್ತದೆ. ನನ್ನ ಟಿಕೆಟ್ ಬದಲಾವಣೆ ಆಗೋದಿಲ್ಲ. ಮೇ ೧೬ ಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಘೋಷಣೆ ಆಗಿದ್ದರೂ ಕೂಡ ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಬಿಜೆಪಿ ಜೆಡಿಎಸ್ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಈ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಎಲ್ಲಿಗೆ ಬಂದು ನಿಲ್ಲುತ್ತೆ ಎಂಬುದೇ ಈಗ ಉಳಿದಿರುವ ಕುತೂಹಲ.
key words : MLC , election, jds, bjp, congress, Council elections, mysore
summary:
Council elections: Congress is all clear, BJP-JD(S) alliance fails to arrive
The JD(S) and the BJP have not reached a consensus on the ticket for the South Teachers’ constituency. Soon after the announcement of the lotus candidate, the JD(S) raised the issue. As per the alliance agreement, we are the candidate finalists.
JD(S) to finalise South Teachers’ candidate on May 15 There is a rivalry between KT Srikantegowda or Vivekananda and the name of the candidate will be finalised soon. The BJP high command had earlier agreed to give the seat to the JD(S) and hence former MLA Sara Mahesh is confident that he will keep his word.