ಮೈಸೂರು, ಜುಲೈ 06, 2019 (www.justkannada.in): ಕಳೆದ ಒಂದು ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸರಕಾರದ ಪತನಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ನ 13 ಅತೃಪ್ತ ಶಾಸಕರು ರಾಜೀನಾಮೆಗೆ ನಿರ್ಧರಿಸಿದ್ದು, ಈ ಸಂಬಂಧ ಸ್ಫೀಕರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.
ಈಗಾಗಲೇ ಸ್ಪೀಕರ್ ಅವರ ಬಳಿ ಸಮಯ ನಿಗದಿ ಪಡಿಸಿದ್ದು, ಮಧ್ಯಾಹ್ನದ ವೇಳೆಗೆ ಎಲ್ಲ 13 ಶಾಸಕರು ಸ್ಫೀಕರ್ ಭೇಟಿ ಮಾಡಿ ಖುದ್ದು ರಾಜೀನಾಮೆ ಪತ್ರ ನೀಡಲಿದ್ದಾರೆ ಎಂದು ಮೂಲಗಳು ಜಸ್ಟ್ ಕನ್ನಡಗೆ ತಿಳಿಸಿವೆ.
ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸರಕಾರ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಹೆಸರೆಳಲು ಇಚ್ಛಿಸಲು ಜಸ್ಟ್ ಕನ್ನಡ ಡಾಟ್ ಇನ್ ಗೆ ಮಾಹಿತಿ ನೀಡಿದ್ದಾರೆ. ಇವರು ನೀಡಿದ ಮಾಹಿತಿ ಪ್ರಕಾರ ಇನ್ನು ಕೆಲವೇ ಗಂಟೆಗಳಲ್ಲಿ ಶಾಸಕರ ರಾಜೀನಾಮೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ರಾಜೀನಾಮೆ ನೀಡಲಿರುವ 13 ಶಾಸಕರಿವರು…
* ಕಾಂಗ್ರೆಸ್ ಮುಖಂಡ ರಾಮಲಿಂಗ ರೆಡ್ಡಿ ಹಾಗೂ ಅವರ ಪುತ್ರಿ ಸೌಮ್ಯ ರೆಡ್ಡಿ
* ಸೋಮಶೇಖರ್
* ಭೈರತಿ ಬಸವರಾಜು
* ಮುನಿರತ್ನ
* ರಮೇಶ್ ಜಾರಕಿಹೋಳಿ
* ಬಿಸಿ ಪಾಟೀಲ್
* ಪ್ರತಾಪ್ ಗೌಡ ಪಾಟೀಲ್
* ಮಹೇಶ್ ಕುಮಟಳ್ಳಿ
* ಶಿವರಾಮ ಹೆಬ್ಬಾರ್
* ಎಚ್.ವಿಶ್ವನಾಥ್
* ಗೋಪಾಲಯ್ಯ
* ನಾರಾಯಣಗೌಡ