ಐತಿಹಾಸಿಕ ಪಂಚಲಿಂಗ ದರ್ಶನಕ್ಕೆ ಕ್ಷಣಗಣನೆ…

ಮೈಸೂರು,ಡಿಸೆಂಬರ್,10,2020(www.justkannada.in) :  ಐತಿಹಾಸಿಕ ಪಂಚಲಿಂಗ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಸಂಜೆ 6ಕ್ಕೆ ವೈದ್ಯನಾಥೇಶ್ವರ ದೇವಾಲಯಕ್ಕೆ ದೀಪ ಬೆಳಗುವ ಮೂಲಕ ಚಾಲನೆ ದೊರೆಯಲಿದೆ.logo-justkannada-mysoreಇಂದಿನಿಂದ 10ದಿನಗಳ ಕಾಲ ಪಂಚಲಿಂಗ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ಹಿನ್ನೆಲೆ ಸರಳವಾಗಿ ಪಂಚಲಿಂಗ ದರ್ಶನ ಮಹೋತ್ಸವಕ್ಕೆ ಕ್ರಮಕೈಗೊಳ್ಳಲಾಗಿದೆ. ಪ್ರಧಾನ ಅರ್ಚಕ ಆನಂದ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಲಿದೆ.

ಈ ಬಾರಿ ಸ್ಥಳೀಯರಿಗೆ ಮಾತ್ರ ಪಂಚಲಿಂಗದ ದರ್ಶನಕ್ಕೆ ಅವಕಾಶ ನೀಡಿದ್ದು, ಕೋವಿಡ್ ಮಾರ್ಗಸೂಚಿ ಪ್ರಕಾರ ಪ್ರತಿ ದಿನ 1000 ಜನರಿಗೆ ಪ್ರವೇಶಕ್ಕೆ ಅವಕಾಶ ಮಾಡಲಾಗಿದೆ. ಪಂಚಲಿಂಗ ದರ್ಶನಕ್ಕೆ ಆಗಮಿಸುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದೆ.

Countdown-Historical-Panchangali

ಭದ್ರತಾ ದೃಷ್ಟಿಯಿಂದ 9ಕಡೆ ಚೆಕ್‌ಪೋಸ್ಟ್ ವ್ಯವಸ್ಥೆ ಹಾಗೂ  ಆರೋಗ್ಯ ಇಲಾಖೆಯಿಂದ ವೈದ್ಯರನ್ನು ಒಳಗೊಂಡ 10 ತಂಡಗಳ ನಿಯೋಜನೆ ಮಾಡಲಾಗಿದ್ದು, ಎಲ್ಲಾ 5 ದೇವಸ್ಥಾನಗಳ ಬಳಿ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.  ಪಂಚಲಿಂಗ ದರ್ಶನ ಮಹೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ಕೋವಿಡ್ ಹಿನ್ನೆಲೆ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಪೂಜೆ‌

Countdown-Historical-Panchangali

ಅಂಕುರಾರ್ಪಣೆ, ನವಗ್ರಹ ಕಲಶಸ್ವಪ್ನ ದೊಂದಿಗೆ ಪಂಚಲಿಂಗ ದರ್ಶನ ಆರಂಭವಾಗಲಿದೆ. ನಾಳೆ ಧ್ವಜಾರೋಹಣ, ರಕ್ಷಾ ಬಂಧನ, ಪುಷ್ಪಮಂಟಪಾರೋಹಣ, ರುಷಾಭಾರೋಹಣ ನಡೆಯಲಿದೆ.

ಡಿ.14ರಿಂದ 19ರವರೆಗೆ 

ಡಿ.14 ರಂದು ಮಹಾಭಿಷೇಕ, ಬೆಳಗ್ಗೆ 7.30 ಕ್ಕೆ ಪಂಚಲಿಂಗ ದರ್ಶನ, ಗಜಾರೋಹಣ ಉತ್ಸವ. ಡಿಸೆಂಬರ್ 15 ರಂದು ಶ್ರೀಮದಿವ್ಯ ಬ್ರಹ್ಮ ರಥೋತ್ಸವ, ಹಂಸವಾಹನೋತ್ಸವ. ಡಿ.16 ರಂದು ಶಯನೋತ್ಸವ, ಅಶ್ವಾರೋಹಣ, ಮೃಗಯಾತ್ರೋತ್ಸವ. ಡಿ.17 ರಂದು ಅವಭೃತ ತೀರ್ಥಸ್ನಾನ, ತೆಪ್ಪೋತ್ಸವ. ಡಿ.18 ರಂದು ಪಂಚಾಭಿಷೇಕ, ಪಂಚೋಪಚಾರ, ಪೂರ್ವಕ ಕೈಲಾಸೋತ್ಸವ, ಡಿ.19 ರಂದು ನಂದಿವಾಹನೋತ್ಸವ ನಡೆಯಲಿದೆ.

Countdown-Historical-Panchangali

 

english summary….

Countdown begins for historic Panchalinga Darshana
Mysuru, Dec. 10, 2020: The countdown for the historic Panchalinga Darshana has begun. The rituals will be launched today at 6 pm by lighting the lamp at the Vaidyanatheshwara Temple.Countdown-Historical-Panchangali
Due to the COVID-19 pandemic, the district administration has allowed 10 days for the public to have darshan for only local devotees. Only 1000 people will be allowed to have darshan as per the COVID guidelines. All the devotees should produce COVID negative certificates mandatorily.
Keywords: Panchalinga Darshana/ countdown

key words : Countdown-Historical-Panchangali