ನವದೆಹಲಿ,ಜನವರಿ,6,2022(www.justkannada.in): ದೇಶದಲ್ಲಿ ಕೊರೋನಾ ಸೋಂಕು ಮತ್ತಷ್ಟು ಹೆಚ್ಚಾಗುತ್ತಿದ್ದು ಕಳೆದ 24 ಗಂಟೆಯಲ್ಲಿ ಬರೋಬ್ಬರಿ 90,928 ಕೋವಿಡ್ ಪ್ರಕರಣಗಳು ಕಂಡು ಬಂದಿದೆ.
ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಈ ಮೂಲಕ ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,51,09,286 ಕ್ಕೆ ಏರಿಕೆಯಾಗಿದೆ. ನಿನ್ನೆಗಿಂತಲೂ ಇಂದು ಶೇ.56.5ರಷ್ಟು ಕೋವಿಡ್ ಕೇಸ್ ಹೆಚ್ಚಳವಾಗಿದೆ. ಹಾಗೆಯೇ ಕಳೆದ 24 ಗಂಟೆಯಲ್ಲಿ ಕೊರೊನಾದಿಂದ 325 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 4,82,876ಕ್ಕೆ ಏರಿಕೆಯಾಗಿದೆ. ದಿನದ ಪಾಸಿಟಿವಿಟಿ ದರ ಶೇ.6.43ಕ್ಕೆ ಏರಿಕೆಯಾಗಿದೆ. ಹಾಗೇ, ಸಕ್ರಿಯ ಪ್ರಕರಣಗಳ ಸಂಖ್ಯೆ 2,85,401ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ 19,206ಮಂದಿ ಕೊರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ ಚೇತರಿಸಿಕೊಂಡವರ ಸಂಖ್ಯೆ 3,43,41,009ಕ್ಕೆ ತಲುಪಿದೆ.
ಒಮಿಕ್ರಾನ್ ಸೋಂಕಿತರ ಸಂಖ್ಯೆ 2630ಕ್ಕೆ ಏರಿಕೆ.
ಇನ್ನು ದೇಶದಲ್ಲಿ ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 2630ಕ್ಕೆ ಏರಿಕೆಯಾಗಿದ್ದು, ಈ ಪೈಕಿ 955ಮಂದಿ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ 797 ದೆಹಲಿಯಲ್ಲಿ 465 ಗುಜರಾತ್ ನಲ್ಲಿ 204 ಒಮಿಕ್ರಾನ್ ಪ್ರಕರಣಗಳಿವೆ.
Key words: country- 90,928 Covid Case- Detection
ENGLISH SUMMARY…
COVID causes serious concern in India again: 90,928 new cases reported in 24 hours
New Delhi, January 6, 2022 (www.justkannada.in): The number of COVID cases is increasing in the country constantly causing a concern. 90,928 new cases were reported in the last 24 hours across the country.
According to the information provided by the Union Health Ministry, the total number of Corona cases has increased to 3,51,09,286. The percentage of cases increased by 56.5% than yesterday. 325 persons have lost their lives at the same time, increasing the tally to 4,82,876. The positivity rate has increased to 6.43% and the number of active cases has increased to 2,85,401.
The number of people who recovered and were discharged from hospitals in the last 24 hours is 19,206. The total number of people who have recovered has increased to 3,43,41,009.
The number of Omicron cases has also increased to 2630, out of them, 955 persons have recovered. While there are 797 Omicron cases in Maharashtra, there are 465 cases in Delhi and 204 in Gujarath.
Keywords: COVID-19/ Omicron /increasing/ concern