ನವದೆಹಲಿ,ಜುಲೈ,25,2022(www.justkannada.in): ದೇಶದ ಸರ್ವೋಚ್ಛ ಪದವಿ ಸಿಕ್ಕಿರುವುದು ನನ್ನ ಭಾಗ್ಯ. ದೇಶದ ಜನರ ಆಶೋತ್ತರ ಈಡೇರಿಸುವೆ. ಈ ದೇಶದ ಜನರು ಹಲವು ದಶಕಗಳಿಂದ ಅಭಿವೃದ್ಧಿ ಕಾಣದ ಜನರು, ದಲಿತರು, ಹಿಂದುಳಿದವರು, ಗಿರಿಜನರು ನನ್ನನ್ನು ತಮ್ಮ ಪ್ರತಿಬಿಂಬವಾಗಿ ನೋಡುತ್ತಾರೆ ಎಂಬ ತೃಪ್ತಿ ನನಗಿದೆ ಎಂದು ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ನುಡಿದರು.
ಭಾರತದ 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ದೇಶವಾಸಿಗಳ ಆಶೋತ್ತರದ ಬಗ್ಗೆ ನನಗೆ ಅರಿವಿದೆ. ಸರ್ವೋಚ್ಚ ಪದವಿ ನೀಡಿದಕ್ಕೆ ನಾನು ಅಭಾರಿ. ಈ ಜವಾಬ್ದಾರಿ ಸಿಕ್ಕಿರುವುದು ನನ್ನ ಭಾಗ್ಯ. ಒಡಿಶಾ ಹಳ್ಳಿಯಿಂದ ಮೊದಲು ಕಾಲೇಜಿಗೆ ಹೋದವಳು ನಾನು. ನನಗೆ ರಾಷ್ಟ್ರಪತಿಯಾಗಲು ಅವಕಾಶ ಸಿಕ್ಕಿದೆ. ಪ್ರತಿವ್ಯಕ್ತಿಗೆ ಅವಕಾಶ ನೀಡುವುದು ಸಂವಿಧಾನ. ದೇಶದ ಪ್ರತಿವ್ಯಕ್ತಿ ಇಂತಹ ಕನಸು ಹೊಂದಬಹುದು. ಮಹಿಳಾಹಕ್ಕು ನನ್ನ ಮೊದಲ ಆದ್ಯತೆ . ಭಾರತದ ಶಕ್ತಿ ಜಗತ್ತಿಗೆ ಗೊತ್ತಿದೆ ಎಂದರು.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಜನಿಸಿದ ದೇಶದ ಮೊದಲ ರಾಷ್ಟ್ರಪತಿ ನಾನು. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ಭಾರತದ ಬಗ್ಗೆ ಹೊಂದಿದ್ದ ನಿರೀಕ್ಷೆಗಳನ್ನು ಪೂರೈಸಲು ನಾವು ಇನ್ನಷ್ಟು ಪ್ರಯತ್ನ ಪಡಬೇಕಾಗಿದೆ. ನಾನು ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗಿದ್ದರ ಹಿಂದೆ ಬಡವರ ಆಶೀರ್ವಾದವಿದೆ. ಕೋಟಿಗಟ್ಟಲೆ ಮಹಿಳೆಯರ ಕನಸುಗಳು ಮತ್ತು ಸಾಮರ್ಥ್ಯಗಳ ಪ್ರತಿಬಿಂಬವಾಗಿ ನಾನು ಈ ಹುದ್ದೆಗೆ ಏರಿದ್ದೇನೆ. ನಾವೆಲ್ಲರೂ ಒಂದಾಗಿ ಭಾರತ ನಿರ್ಮಾಣ ಮಾಡೋಣ ಎಂದು ತಿಳಿಸಿದರು.
Key words: country-Fulfilling –aspirations-new president – Draupadi Murmu