“ದೇಶದ ಸ್ಥಿತಿ ಬೇವು ಬಿತ್ತಿ, ಮಾವು ಬೆಳೆಯುವಂತ್ತಾಗಿದೆ” : ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವ್ಯಂಗ್ಯ

ಮೈಸೂರು,ಫೆಬ್ರವರಿ,27,2021(www.justkannada.in) : ಬೇವು ಬಿತ್ತಿ, ಮಾವು ಬೆಳೆಯಲು ಸಾಧ್ಯವೇ. ಪ್ರಸ್ತುತ ದೇಶದ ಸ್ಥಿತಿ ಹೀಗಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿದ್ದು, ಸರ್ವಾಧಿಕಾರತ್ವ ಜಾರಿಗೆ ಬರುವ ಸ್ಥಿತಿ ಎದುರಾಗಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆತಂಕವ್ಯಕ್ತಪಡಿಸಿದರು.

ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಎನ್.ರಾಚಯ್ಯ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿದ್ದ “ದಲಿತ ಚಳವಳಿ ಮತ್ತು ರೈತ ಚಳವಳಿ ಒಂದು ಮುಖಾಮುಖಿ” ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕೀಯ ಅಧಿಕಾರವು ಎಲ್ಲಾ ಸಮಸ್ಯೆಗಳ ಬಗೆಹರಿಸುವ ಕೀಲಿಕೈ ಎನ್ನಲಾಗಿದೆ. ಆದರೆ, ಇಂದು ಧರ್ಮ, ಜಾತಿಯೇ ಪ್ರಮುಖ ಎನ್ನುವಂತ್ತಾಗುತ್ತಿದೆ. ಮಾತನಾಡಿದರೆ, ಶಿಕ್ಷೆಗೆ ಒಳಪಡಬೇಕಾಗುತ್ತದೆ. ರಾಜಕೀಯ ನಾಯಕರುಗಳು ಆಯುಧಗಳಾಗಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.

ಜಾತಿ ಆಧಾರದ ಮೇಲೆ ರಾಜಕೀಯ ನಡೆಯುತ್ತಿದೆ. ಟಿಪ್ಪು ಭೂಮಿ ಇಲ್ಲದವರಿಗೆ ಭೂಮಿ ನೀಡಿದ, ದೇವದಾಸಿ ಪದ್ಧತಿ ನಿಲ್ಲಿಸಿದ. ಆತನ ಬಗ್ಗೆ ಮಾತನಾಡಿದರೆ, ಹಿಂದೂ ವಿರೋಧಿ ಎನ್ನುತ್ತಾರೆ. ಅಹಿಂದ ಸಮ್ಮೇಳನ ಮಾಡಬೇಡಿ ಎನ್ನುತ್ತಾರೆ, ಹಿಂದ ಮಾತಾಡಬೇಡಿ ಎನ್ನುತ್ತಾರೆ. ಜನ ವಿರೋಧಿ ಕಾಯ್ದೆಗಳ ಜಾರಿಗೊಳಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಧರ್ಮದ ಹೆಸರಿನಲ್ಲಿ ಜನರನ್ನು ಹೆದರಿಸಲಾಗುತ್ತಿದೆ. ಸೌಹಾರ್ದತೆಯಿಲ್ಲದೇ ಆಡಳಿತ ಯಶಸ್ವಿಯಾಗಲು ಸಾಧ್ಯವೇ. ಇಂತಹ ಪರಿಸ್ಥಿತಿಯಲ್ಲಿ ರೈತರು, ದಲಿತರು ಸೇರಿದಂತೆ ಎಲ್ಲಾ ಸಂಘಟನೆಗಳು ಒಗ್ಗೂಡಿ ಚಳವಳಿ ನಡೆಸುವುದು ಅನಿವಾರ್ಯ ಎಂದರು.

ಎನ್.ರಾಚಯ್ಯ ಅವರು ನೊಂದವರ, ಬಡವರ ಧ್ವನಿಯಾಗಿದ್ದರು. ಹಿಂದುಳಿದವರಿಗೆ ಧೈರ್ಯ ತುಂಬುವ ಕಾರ್ಯಮಾಡಿದರು. ಯಾರ ಮುಲಾಜಿಗೂ ಒಳಗಾಗುತ್ತಿರಲಿಲ್ಲ. ಸಿಎಂ ವಿರುದ್ಧವೇ ಅವಿಶ್ವಾಸ ಮಂಡಿಸಿದಂತಹವರು ಎಂದು ಸ್ಮರಿಸಿದರು.

ಅಸ್ಪೃಶ್ಯರ ಅಭಿವೃದ್ಧಿಗಾಗಿ ಅಧಿಕಾರಿಗಳ ನೇಮಿಸಿದರೆ ಆ ಅಧಿಕಾರಿಗಳು ಎಡ, ಬಲ ವನ್ನು ಹುಟ್ಟುಹಾಕಿದರು. ಇಂದು ಎಡಗೈ, ಬಲಗೈ, ಹೊಲೆಯ, ಮಾದಿಗ ಎಂದು ನಮನ್ನು ನಾವೇ ದೂಷಿಸಿಕೊಳ್ಳುವ ಸ್ಥಿತಿಗೆ ತಂದು ನಿಲ್ಲಿಸಲಾಗಿದೆ. ಜಾತಿವ್ಯವಸ್ಥೆಯಲ್ಲಿ ನಮ್ಮನ್ನು ನಾವೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಬೇಸರವ್ಯಕ್ತಪಡಿಸಿದರು.

ಚರಿತ್ರೆಯಲ್ಲಿ ಶಾಶ್ವತರಾದ ಎನ್.ರಾಚಯ್ಯರಂತಹ ರಾಜಕೀಯ ನಾಯಕರ ಕುರಿತಂತೆ ಯುವ ಸಮುದಾಯ ಅರಿಯಬೇಕು. ಸಮಸ್ಯೆಗಳ ಕುರಿತಂತೆ ಚರ್ಚೆಗಳಾಗಬೇಕು, ಚಳವಳಿಗಳಾಗಬೇಕು ಎಂದು ಸಲಹೆ ನೀಡಿದರು.

country-Status-Sow-Neem-Mango-growing-Former Minister-Dr. H.C.Mahadevappa

ಪ್ರಜಾಪ್ರಭುತ್ವದ ಭವಿಷ್ಯ ಏನು ಎಂದು ಯೋಚಿಸಬೇಕಿದೆ. ಪ್ರಜಾಪ್ರಭುತ್ವದ ಆಧಾರಸ್ತಂಭಗಳು ದುರ್ಬಲವಾದರೆ, ಸರ್ವಾಧಿಕಾರಿ ಆಡಳಿತಕ್ಕೆ ಒಳಗಾಗಬೇಕಾಗುತ್ತದೆ. ಸಂವಿಧಾನದಿಂದ ವೈವಿಧ್ಯತೆಯ ಭಾರತ ರೂಪುಗೊಂಡಿದೆ. ಎಲ್ಲರನ್ನೂ ಒಳಗೊಂಡಿದೆ ಎಂದು ವಿವರಿಸಿದರು.

ಕೊರೊನಾ ಪ್ರಕೃತಿಯ ಎದುರು ಬಡವ, ಶ್ರೀಮಂತ ಎಂಬ ಬೇಧವಿಲ್ಲ. ದೇವಸ್ಥಾನ, ಮಸೀದಿ, ಚರ್ಚ್ ಗಳಿಗಿಂತ ಆಸ್ಪತ್ರೆ ಮುಖ್ಯ ಹೀಗೆ…ಅನೇಕ ಸತ್ಯಗಳನ್ನು ಸಾರಿದೆ. ಹೀಗಾಗಿಯೂ, ನಾವು ಇನ್ನೂ ಪಾಠ ಕಲಿತ್ತಿಲ್ಲ. ಪ್ರಕೃತಿ ಶಾಶ್ವತ ಹೊರತು ಮನುಷ್ಯ ಶಾಶ್ವತವಲ್ಲ ಎಂದರು.

ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಮುಜಾಫರ್ ಅಸ್ಸಾದಿ ಮಾತನಾಡಿ, ಇತಿಹಾಸವನ್ನು ಹೇಗೆ?, ಎಲ್ಲಿಂದ? ಯಾರಿಂದ? ಕಟ್ಟಲಾಗಿದೆ ಎಂಬುದನ್ನು ಅರಿಯಬೇಕು. ಇತಿಹಾಸವನ್ನು ಅರಿಯದೇ ಚರಿತ್ರೆ ಸೃಷ್ಠಿಸುವುದಕ್ಕೆ ಸಾಧ್ಯವಿಲ್ಲ. ರಾತ್ರೋರಾತ್ರಿ ಚಳುವಳಿಗಳು ನಡೆಯುವುದಿಲ್ಲ. ಚಳುವಳಿಗೆ ಇತಿಹಾಸದ ಪ್ರಜ್ಞೆ ಬಹಳ ಮುಖ್ಯ ಎಂದರು.

ದಲಿತ ಚಳವಳಿ ಹಾಗೂ ರೈತ ಚಳವಳಿಗಳು ಇದುವರೆವಿಗೂ ಮುಖಾಮುಖಿಯಾಗುತ್ತಿವೆ. ಪ್ರಜಾಪ್ರಭುತ್ವದ ಉಳಿವಿನ ದೃಷ್ಠಿಯಿಂದ ದಲಿತ ಹಾಗೂ ರೈತ ಈ ಎರಡು ಚಳವಳಿಗಳ ಮುಖಾಮುಖಿಯ ಬದಲಿಗೆ ಅನುಸಂಧಾನ ಬಹಳ ಅಗತ್ಯವಾಗಿದೆ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಮಾತನಾಡಿ, ದೇಶದಲ್ಲಿ ದಲಿತರು ಅಸ್ಪೃಶ್ಯತೆ, ಅಸಮಾನತೆ, ಜಾತಿ, ಧರ್ಮದ ಹೆಸರಿನಲ್ಲಿ ಶೋಷಣೆಗೆ ಒಳಗಾಗಿದ್ದಾರೆ. ಅವರನ್ನು ಮಕ್ಕಳಂತೆ ಪೋಷಿಸುವ ಕಾರ್ಯವಾಗಬೇಕಿದೆ. ಸಂವಿಧಾನ ನೀಡಿರುವ ಮೀಸಲಾತಿಯಲ್ಲಿ 100% ದಲಿತರಲ್ಲಿ ಕೇವಲ 9%ನಷ್ಟು ಮಾತ್ರ ಸಭಲರಾಗಿದ್ದಾರೆ. ಇನ್ನೂ 91% ದಲಿತರ ಸ್ಥಿತಿ ಹಾಗೆಯೇ ಇದೆ ಎಂದು ಬೇಸರವ್ಯಕ್ತಪಡಿಸಿದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ರಾಜ್ಯ ಮಾಹಿತಿ ನಿವೃತ್ತ ಆಯುಕ್ತ ಎಲ್.ಕೃಷ್ಣಮೂರ್ತಿ ಇತರರು ಉಪಸ್ಥಿತರಿದ್ದರು.

ENGLISH SUMMARY…

“Condition of our country is pathetic: former Minister Dr. H.C. Mahadevappa ridicules BJP
Mysuru, Feb. 27, 2021 (www.justkannada.in): “Can we grow mangoes by sowing neem?! The present condition of our country is also the same. Values of democracy are declining and we are facing the imposition of dictatorship,” opined former minister Dr. H.C. Mahadevappa.
He inaugurated the state-level seminar on the topic, “Face-to-face of Dalit Movement and Farmers Movement,” organized by the N.Rachaiah Student Centre of the Political Science Department, University of Mysore.
In his address, he said, “Political power is said to be the key to solve all the problems. But, nowadays only one particular religion and caste are emerging as more important. If we speak we will have to face punishment. Political leaders have become weapons.”
“Today politics is running based on religion and caste. Tipu Sultan provided land for those who didn’t have land, he stopped the Devadasi system. Today if we speak about him they will label us as anti-Hindu. They ask us not to conduct the Ahinda conference. They are implementing anti-people laws,” he criticized.country-Status-Sow-Neem-Mango-growing-Former Minister-Dr. H.C.Mahadevappa
“N. Rachaiah was the voice of the poor and the downtrodden. He instilled courage and confidence among the voiceless people. He was the person who moved no-confidence against the Chief Minister. The officials who were appointed for the upliftment of untouchables gave birth to the left and right concepts. Today we have been made to stand in such a situation where are fighting among ourselves calling us leftists, rightists, dalits, etc. We are losing ourselves in this caste-system,” he said.
Keywords: State-level seminar/ Dr. H.C. Mahadevappa/ University of Mysore/ BJP/ Dictatorship

key words : country-Status-Sow-Neem-Mango-growing-Former Minister-Dr. H.C.Mahadevappa