ಬೆಂಗಳೂರು,ಮೇ,31,2019(www.justkannada.in): ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಕಂಟ್ರಿಮೇಡ್ ಗ್ರನೇಡ್ ಪತ್ತೆಯಾದ ಹಿನ್ನೆಲೆ ನಗರದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ಕಂಟ್ರಿಮೇಡ್ ಗ್ರೆನೇಡ್ ಪತ್ತೆಯಾದ ಬೆನ್ನಲ್ಲೆ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತಿದ್ದು, ತನಿಖೆಗೆ 10 ವಿಶೇಷ ತಂಡಗಳನ್ನು ರಚಿಸಲಾಗಿದೆ. ಪೊಲೀಸ್ ಅಧಿಕಾರಿಗಳಾದ ರವಿಚನ್ನಣ್ಣನವರ್, ಮಹಾಂತ್ ರೆಡ್ಡಿ ನೇತೃತ್ವದಲ್ಲಿ 5 ತಂಡಗಳು ತನಿಖೆಗಿಳಿದಿದ್ದು, ರೈಲ್ವೇ ಎಸ್‌ಪಿ ಭೀಮಾಶಂಕರ್ ಗುಳೇದ್ ನೇತೃತ್ವದ5 ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.
ಇನ್ನು ಮೆಟ್ರೋ ನಿಲ್ದಾಣದಲ್ಲಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣದಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಸಿಸಿಟಿವಿಗಳ ಪರಿಶೀಲನೆನಡೆಸಲಾಗುತ್ತಿದ್ದು, ಎಲ್ಲಾ ನಿಲ್ದಾಣದಲ್ಲಿ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳಗಳು ತಪಾಸಣೆ ನಡೆಸುತ್ತಿವೆ. ಬೆಳಿಗ್ಗೆ ರೈಲ್ವೆ ನಿಲ್ದಾಣದ ಫ್ಲಾಟ್ ಫಾರ್ಮ್ ನಲ್ಲಿ ಅನುಮಾನಸ್ಪದ ವಸ್ತು ಪತ್ತೆಯಾಗಿತ್ತು. ಸ್ಥಳಕ್ಕೆ ಆಗಿಸಿದ್ದ ಬಾಂಬ್ ಪತ್ತೆದಾಳ, ಬಾಂಬ್ ನಿಷ್ಕ್ರಿಯಾ ದಳ ಪರಿಶೀಲನೆ ನಡೆಸಿದ್ದು. ಈ ವೇಳೆ ಪತ್ತೆಯಾಗಿದ್ದು ಕಂಟ್ರಿಮೇಡ್ ಗ್ರೆನೇಡ್ ಎಂದು ತಿಳಿದು ಬಂದಿತ್ತು.
Key words: CountryMed grenade detection case at Bangalore railway station.High alert announcement.
#grenade #detectioncase #Bangalore #railwaystation