ಬೆಂಗಳೂರು, ಸೆಪ್ಟೆಂಬರ್ 19, 2023 (www.justkannada.in): ಇಂಗ್ಲೆಂಡ್ನಲ್ಲಿ ಪ್ರಸ್ತುತ ನಡೆಯುತ್ತಿರುವ ಕೌಂಟಿ ಚಾಂಪಿಯನ್ಶಿಪ್ನಲ್ಲಿ ನಡವಳಿಕೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚೇತೇಶ್ವರ ಪೂಜಾರ ಅವರನ್ನು ಒಂದು ಪಂದ್ಯಕ್ಕೆ ಅಮಾನತುಗೊಳಿಸಲಾಗಿದೆ.
ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ಡವಳಿಕೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇಸಿಬಿ (ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ) ಅಮಾನತುಗೊಳಿಸಿದೆ.
ಪೂಜಾರ ಅವರ ಈ ಅಮಾನತಿಗೆ ಮುಖ್ಯ ಕಾರಣ ಸಹ ಆಟಗಾರರಾದ ಜಾಕ್ ಕಾರ್ಸನ್ ಮತ್ತು ಟಾಮ್ ಹೈನ್ಸ್ ಅವರ ಕ್ರೀಡಾಹೀನ ವರ್ತನೆ. ಹೋವ್ನಲ್ಲಿ ನಡೆದ ಲೀಸೆಸ್ಟರ್ಶೈರ್ ವಿರುದ್ಧದ ಪಂದ್ಯದ ವೇಳೆ ಈ ಘಟನೆ ನಡೆದಿದೆ.
ಪೂಜಾರ ಇಸಿಬಿಯ ವೃತ್ತಿಪರ ನಡವಳಿಕೆಯ ನಿಯಮಾವಳಿಗಳನ್ನು ಮುರಿಯದಿದ್ದರೂ ನಾಯಕನಾಗಿ ಕಾರ್ಸನ್ ಮತ್ತು ಹೈನ್ಸ್ ಅವರ ನಡವಳಿಕೆಯನ್ನು ತಡೆಯುವಲ್ಲಿ ವಿಫಲವಾಗಿರುವುದು ಅವರ ಅಮಾನತಿಗೆ ಕಾರಣವಾಗಿದೆ.
ಅಂದಹಾಗೆ ಈ ಬಾರಿಯ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಚೇತೇಶ್ವರ ಪೂಜಾರ ಸಸೆಕ್ಸ್ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇದುವರೆಗೆ ಆಡಿದ ಪಂದ್ಯಗಳಲ್ಲಿ ಮೂರು ಶತಕಗಳನ್ನು ದಾಖಲಿಸಿದ್ದಾರೆ. ಅಲ್ಲದೆ 54.08 ರ ಪ್ರಭಾವಶಾಲಿ ಬ್ಯಾಟಿಂಗ್ ಸರಾಸರಿಯನ್ನು ಕಾಯ್ದುಕೊಂಡಿದ್ದಾರೆ.