ಸಾಲಬಾಧೆ ತಾಳಲಾರದೆ ದಂಪತಿ ಆತ್ಮಹತ್ಯೆ

ಬಾಗಲಕೋಟೆ,ಜನವರಿ,23,2025 (www.justkannada.in): ಸಾಲಬಾಧೆ ತಾಳಲಾರದೆ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನಲ್ಲಿ ನಡೆದಿದೆ.

ಸೋರಗಾವಿ ಗ್ರಾಮದ ನಿವಾಸಿಗಳಾದ ಮಲ್ಲಪ್ಪ ಲಾಳಿ(55), ಮಾದೇವಿ ಲಾಳಿ(50) ಮೃತಪಟ್ಟವರು. ಮುಧೋಳ ಯಾದವಾಡ ರಸ್ತೆ ಘಟಪ್ರಭಾ ನದಿಯ ಸೇತುವೆ ಕಬ್ಬಿಣದ ಪೈಪ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಮೃತ ದಂಪತಿ ಮೆಟಗುಡ್ಡದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಈ ಮಧ್ಯೆ 20 ಜನರ ಬಳಿ ಕೈಸಾಲ ಮಾಡಿದ್ದರು. ಕಿರಾಣಿ ಅಂಗಡಿಯಿಂದ ತಿಂಗಳಿಗೆ 20 ಸಾವಿರ ಆದಾಯವಿದ್ದು ಈ ಹಿನ್ನೆಲೆಯಲ್ಲಿ ಸಾಲ ವಾಪಸ್ ನೀಡುವಂತೆ ಸಾಲಗಾರರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

Key words: couple, commits, suicide