ಬೆಂಗಳೂರು,ಅಕ್ಟೋಬರ್,14,2024 (www.justkannada.in): ದಂಪತಿ ಇಬ್ಬರು ಮಕ್ಕಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಯಲಹಂಕ ತಾಲ್ಲೂಕಿನ ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ನಗರದಲ್ಲಿ ಈ ಘಟನೆ ನಡೆದಿದೆ. ಕಲ್ಬುರ್ಗಿ ಮೂಲದ ಅವಿನಾಶ್, ಪತ್ನಿ ಹಾಗೂ ಮಕ್ಕಳಾದ ಅದಿರಾ(5),ಅಣ್ಣಯ್ಯ ಆತ್ಮಹತ್ಯೆಗೆ ಶರಣಾದವರು.
ಅವಿನಾಶ್ ದಂಪತಿ ಕಳೆದ 5 ವರ್ಷದ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಅವಿನಾಶ್ ಟ್ಯಾಕ್ಸಿಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದನು. ಈ ಮಧ್ಯೆ ಇವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ರಾಜಾನುಕುಂಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Key words: couple, two children, committed suicide, hanging