ಕೋರ್ಟ್ ಜವಾನನ ಮಗಳು ಸದ್ಯದಲ್ಲೇ ಆಗಲಿದ್ದಾರೆ ಬಿಹಾರದ ನ್ಯಾಯಾಧೀಶೆ..

 

ಪಾಟ್ನಾ, ಡಿ.04, 2019 : (www.justkannada.in news ) ಯಶಸ್ಸು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೇಲೆ ಅವಲಂಬಿತವಾಗಿದೆ ಎಂಬುದು ಮತ್ತೆ ಸಾಬೀತಾಗಿದೆ. ಜತೆಗೆ ವಯಸ್ಸು ಯಾವುದೇ ಸಾಧನೆಗೆ ಅಡ್ಡಿಯಿಲ್ಲ.ಎಂಬುದು ಸಹ. ಐದು ವರ್ಷದ ಮಗುವಿನ ತಾಯಿಯಾದ ಅರ್ಚನಾ ಈ ಸಾಧನೆ ಮಾಡಿದ ಮಹಿಳೆ.

ಬಿಹಾರದ ರಾಜಧಾನಿಯ ಕಂಕರ್‌ಬಾಗ್ ಪ್ರದೇಶದಲ್ಲಿ ಜನಿಸಿದ ಅರ್ಚನಾ, ಸರನ್ ಜಿಲ್ಲೆಯ ಸೋನೆಪುರ ನ್ಯಾಯಾಲಯದಲ್ಲಿ ಪಿಯೋನ್‌ ಒಬ್ಬರ ಪುತ್ರಿ, ತನ್ನ ಎರಡನೇ ಪ್ರಯತ್ನದಲ್ಲಿ ಬಿಹಾರ ನ್ಯಾಯಾಂಗ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ಕಾರಣ ಈಗ ನ್ಯಾಯಾಧೀಶರಾಗಲು ಸಜ್ಜಾಗಿದ್ದಾರೆ. ತನ್ನ ಈ ಯಶಸ್ಸನ್ನು ಆಚರಿಸಲು ತನ್ನ ತಂದೆ ಗೌರಿನಂದನ್ ಇಲ್ಲ ಎಂಬುದು ಅವರ ವಿಷಾದ. ( ಕೆಲ ಸಮಯದ ಹಿಂದೆ ಅವರ ತಂದೆ ಮೃತಪಟ್ಟರು )

ನನ್ನ ತಂದೆ ಕೋರ್ಟ್ ನಲ್ಲಿದ್ದ ಕಾರಣ, ನ್ಯಾಯಾಧೀಶರೊಬ್ಬರಿಗೆ ಜವಾನನಾಗಿ ಸೇವೆ ಸಲ್ಲಿಸುತ್ತಿದ್ದರು. ಇದು ನನಗೆ ಬಾಲ್ಯದಲ್ಲಿ ಇಷ್ಟವಾಗಲಿಲ್ಲ. ಆಗ ನಾನು ಒಂದು ದಿನ ನ್ಯಾಯಾಧೀಶಳಾಗುತ್ತೇನೆ ಎಂದು ತಂದೆಗೆ ನಾನೇ ಭರವಸೆ ನೀಡಿದ್ದೆ ಎಂಬುದನ್ನು ಅರ್ಚನಾ ನೆನಪಿಸಿಕೊಂಡರು.

ನನ್ನ ತಂದೆಯ ಮರಣದ ನಂತರ ಅಧ್ಯಯನವನ್ನು ಮುಂದುವರಿಸುವುದು ಸುಲಭವಲ್ಲವಾದರೂ, ನನ್ನ ತಾಯಿ ನನ್ನೊಂದಿಗೆ ಕಂಬದಂತೆ ನಿಂತರು. ಕೆಲವು ಸಂಬಂಧಿಕರು ಸಹ ನಮಗೆ ಕಷ್ಟಗಳನ್ನು ಎದುರಿಸಲು ಸಹಾಯ ಮಾಡಿದರು.

ಶಾಸ್ತ್ರಿ ನಗರ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿಯಾಗಿ 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನಕ್ಕೆ ಹೋದೆ. ಬಳಿಕ ತಾನು ಓದಿದ ಶಾಲೆಗೆ ಕಂಪ್ಯೂಟರ್ ಶಿಕ್ಷಕಿಯಾಗಿ ಸೇರ್ಪಡೆಗೊಂಡರು.

ಮದುವೆಯ ನಂತರ, ನ್ಯಾಯಾಧೀಶರಾಗುವ ತನ್ನ ಕನಸನ್ನು ನನಸಾಗಿಸಲು ಸಾಧ್ಯವಿಲ್ಲ ಎಂದು ಅರ್ಚನಾ ಭಾವಿಸಿದರು. ಆದರೆ ಆಕೆಯ ಆಸೆ ತಿಳಿದ ನಂತರ, ಪಾಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ಗುಮಾಸ್ತರಾದ ಅರ್ಚನಾ ಅವರ ಪತಿ ರಾಜೀವ್ ರಂಜನ್ ಅವರನ್ನು ಬೆಂಬಲಿಸಲು ನಿರ್ಧರಿಸಿ ಅಧ್ಯಯನವನ್ನು ಮುಂದುವರಿಸಲು ಪ್ರೋತ್ಸಾಹಿಸಿದರು.

ಜತೆಗೆ ಅರ್ಚನಾ ಅವರ ಮಾವಂದಿರ ಬೆಂಬಲವು ಸಹ ಅವರಲ್ಲಿ ಭರವಸೆ ಮೂಡಿಸಿತು. ಸಂದರ್ಭಗಳು ಅರ್ಚನಾರನ್ನು ಪುಣೆಗೆ ಕರೆತಂದವು. ಈ ಅವಕಾಶ ಸದುಪಯೋಗ ಪಡಿಸಿಕೊಂಡ ಅರ್ಚನಾ, ಎಲ್ಎಲ್ ಬಿ ಪೂರ್ಣಗೊಳಿಸಿದರು. ಬಳಿಕ ಪಾಟ್ನಾಗೆ ಹಿಂದಿರುಗಿದ ಅರ್ಚನಾ, 2014 ರಲ್ಲಿ ಪೂರ್ಣಿಯಾದ ಬಿಎಂಟಿ ಕಾನೂನು ಕಾಲೇಜಿನಿಂದ ಎಲ್‌ಎಲ್‌ಎಂ ಮಾಡಿದರು. ನಂತರ, ಅವರು ಕೋಚಿಂಗ್ ತರಗತಿಗಳಿಗೆ ಹಾಜರಾಗಲು ದೆಹಲಿಗೆ ಬಂದರು.
“ಅಧ್ಯಯನವನ್ನು ಮುಂದುವರಿಸುವುದು ಎಂದಿಗೂ ಸುಲಭದ ನಿರ್ಧಾರವಲ್ಲ, ವಿಶೇಷವಾಗಿ ಮದುವೆಯ ನಂತರ ಮತ್ತು ಮಗುವಿಗೆ ಜನ್ಮ ನೀಡಿದ ಬಳಿಕ . ಆದರೆ ನನ್ನ ಗಂಡ ಯಾವಾಗಲೂ ನನ್ನನ್ನು ಬೆಂಬಲಿಸುತ್ತಿದ್ದರು ”ಎಂದು ಅರ್ಚನಾ ನೆನಪಿಸಿಕೊಂಡರು.

key words : Court peon’s daughter set to be judge in Bihar

ENGLISH SUMMARY :

Archana, a mother of five-year-old child, has proved it again that success depends on hard work and dedication, and the age is no bar to any achievement. Born in the Kankarbagh area of Bihar capital, Archana, daughter of a peon at the Sonepur court in the Saran district, is set to be the judge as she cleared the Bihar Judicial Service in her second attempt. She, however, has only regret that her father Gaurinandan is not around to celebrate her success. He passed away some time back.