ಮೈಸೂರು,ಜೂನ್,3,2022(www.justkannada.in): ವೇಶ್ಯಾವೃತ್ತಿ ಒಂದು ಅಪರಾಧವಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿರುವ ಹಿನ್ನೆಲೆ, ನ್ಯಾಯಾಲಯದ ತೀರ್ಪು ಲೈಂಗಿಕ ಕಾರ್ಯಕರ್ತೆಯರ ರಕ್ಷಣೆಗಾಗಿ ಇದೆಯೇ ಹೊರತು ದಂಧೆ ನಡೆಸುವವರಿಗಲ್ಲ ಎಂದು ಒಡನಾಡಿ ಸೇವಾಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಹೇಳಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಒಡನಾಡಿ ಸೇವಾಸಂಸ್ಥೆಯ ಪ್ರಮುಖರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸ್ಟ್ಯಾನ್ಲಿ ಮಾತನಾಡಿ, ವೇಶ್ಯಾವೃತ್ತಿಯೇ ಬೇರೆ, ದಂಧೆಯೇ ಬೇರೆ. ಲೈಂಗಿಕ ವೃತ್ತಿಯನ್ನು ಒಂದು ದಂಧೆಯನ್ನಾಗಿ ಪರಿವರ್ತಿಸುವವರಿಗೆ ರಕ್ಷಣೆ ನೀಡುವುದಾಗಿ ನ್ಯಾಯಾಲಯದ ತೀರ್ಪಿನಲ್ಲಿ ಹೇಳಿಲ್ಲ. ನ್ಯಾಯಾಲಯದ ತೀರ್ಪು ಲೈಂಗಿಕ ಕಾರ್ಯಕರ್ತೆಯರ ರಕ್ಷಣೆಗಾಗಿ ಇದೆಯೇ ಹೊರತು ದಂಧೆ ನಡೆಸುವವರಿಗಲ್ಲ.
ಈ ಬಗ್ಗೆ ವೇಶ್ಯಾವೃತ್ತಿಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವ ಪೊಲೀಸ್ ಇಲಾಖೆ, ವಕೀಲರು, ಸಂಘ ಸಂಸ್ಥೆಗಳು ಹಾಗೂ ಇತರ ಭಾಗಿದಾರರು ಅರ್ಥ ಮಾಡಿಕೊಳ್ಳಬೇಕಿದೆ. ಇದನ್ನು ಸಮರ್ಪಕವಾದ ಕಾನೂನಿನ ಜ್ಞಾನದೊಡನೆ ಮನನ ಮಾಡಿಕೊಳ್ಳುವ ಅಗತ್ಯವಿದೆ. ವೇಶ್ಯಾವಾಟಿಕೆ ವಿರುದ್ದ ಕಾರ್ಯಾಚರಣೆ ನಡೆಸುವ ಪೊಲೀಸರು ಮಹಿಳೆಯನ್ನು ಬಂಧಿಸುವಂತಿಲ್ಲ, ಹಿಂಸಿಸುವಂತಿಲ್ಲ, ಸಂತ್ರಸ್ತೆಯಾಗಿಸುವಂತಿಲ್ಲ ಎಂದು ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖವಾಗಿದೆ. ಈ ಬಗ್ಗೆ ನ್ಯಾಯಮೂರ್ತಿ ಎಲ್ ನಾಗೇಶ್ ರಾವ್ ನೇತೃತ್ವದ ತ್ರಿಸದಸ್ಯ ಪೀಠ ನೀಡಿರುವ ತೀರ್ಪಿನಲ್ಲಿ ಹೇಳಲಾಗಿದೆ ಎಂದರು.
Key words: court’s-decision – protection -sex workers-odanadi seva samsthe
ENGLISH SUMMARY…
Court judgement is to protect sex workers, not for brokers: Odanadi Seva Samsthe
Mysuru, June 3, 2022 (www.justkannada.in): Odanadi Seva Samsthe Director Stanley today, expressed his view that the Hon’ble Supreme Court’s order says sex work is not a crime. The judgement is to protect the sex workers, not to protect the brokers.
Addressing a press meet in Mysuru today, he said, “sex work is different and business is different. The Hon’ble SC’s judgement doesn’t say it will protect people who convert sex work into a business. The SC judgement is to protect sex workers, not to those who do business in its name,” he said.
The police department, legal fraternity and associations and other stakeholders who play a vital role in prevention of sex work should understand this. It should be understood under the legal context. The police who conduct raids cannot arrest the girls, should not harm physically according to the court verdict, given by Justice L Nageshrao led three-member bench.
Keywords: Odanadi/ Stanley/ sex work/ Supreme Court judgement