ದೇಶದಲ್ಲಿ ಮತ್ತೆ ಹೆಚ್ಚುತ್ತಿರುವ ಕೋವಿಡ್ :  ಒಂದೇ ದಿನದಲ್ಲಿ 58,097 ಕೊರೋನಾ ಪ್ರಕರಣಗಳು ಪತ್ತೆ.

ನವದೆಹಲಿ,ಜನವರಿ,5,2022(www.justkannada.in):   ದೇಶದಲ್ಲಿ ಕೊವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು   ಕಳೆದ 24 ಗಂಟೆಯಲ್ಲಿ ಬರೋಬ್ಬರಿ 58,097 ಕೊರೊನಾ ಸೋಂಕಿನ ಕೇಸ್ ಗಳು ಪತ್ತೆಯಾಗಿವೆ.

ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಒಂದೇ ದಿನದಲ್ಲಿ 58,097 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದು ನಿನ್ನೆಗಿಂತಲೂ ಶೇ.55ರಷ್ಟು ಅಧಿಕವಾದ ಹಾಗಾಗಿದೆ ಒಂದೇ ದಿನದಲ್ಲಿ  ಕಳೆದ 24 ಗಂಟೆಯಲ್ಲಿ 534 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 4,82,551ಕ್ಕೆ ಏರಿಕೆಯಾಗಿದೆ.  ಹಾಗೆಯೇ, ಒಮಿಕ್ರಾನ್​ ಸೋಂಕಿತರ ಸಂಖ್ಯೆ ದೇಶದಲ್ಲಿ 2135ಕ್ಕೆ ತಲುಪಿದೆ.

ನಿನ್ನೆ 37, 379 ಸೋಂಕಿನ ಪ್ರಕರಣಗಳು ದಾಖಲಾಗಿದ್ದವು. ಆದರೆ ಇಂದು, ಕೇವಲ 24ಗಂಟೆಯಲ್ಲಿ ಬರೋಬ್ಬರಿ 58,097 ಕೊರೊನಾ ಸೋಂಕಿನ ಕೇಸ್​ಗಳು ಪತ್ತೆಯಾಗಿವೆ.ENGLISH SUMMARY…

Number of COVID cases in the country increasing again
New Delhi, January 5, 2022 (www.justkannada.in): The number of COVID cases is increasing in the country day by day. 58,097 new cases are reported across the country in the last 24 hours.
According to the information provided by the Union Health Ministry, the number of COVID cases has increased by 55% compared to yesterday, just in one day. About 534 persons have lost their lives in the last 24 hours, increasing the tally to 4,82,551. The number of Omicron cases has increased to 2135.
Yesterday 37,379 cases were reported. But today, 58,097 cases have been reported across the country in the last 24 hours.
The State Government has introduced tough rules across the state following the increasing number of corona cases. Several decisions were taken in the meeting held yesterday in the leadership of Chief Minister Basavaraj Bommai.
Keywords: COVID-19 pandemic/ increasing cases/ tough rules/ introduced.

 

Key words: covid-19 – again -rising – country-58,097 cases -single day.