ಮೈಸೂರು, ಅಕ್ಟೋಬರ್,2,2020(www.justkannada.in): ಮೈಸೂರು ವಿಭಾಗದ ಕೋವಿಡ್ 19 – ಆರ್ಥಿಕ ಸ್ಪಂದನ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿ ಎಸ್.ಟಿ.ಸೋಮಶೇಖರ್ ಚೆಕ್ ವಿತರಿಸಿದರು.
ಮೈಸೂರು ವಿಭಾಗದ ವಿವಿಧ ಸಹಕಾರ ಕೇಂದ್ರ ಬ್ಯಾಂಕ್ ಗಳ ವತಿಯಿಂದ 8 ಜಿಲ್ಲೆಯ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಯಿತು. ಅರ್ಹ ಫಲಾನುಭವಿಗಳಿಗೆ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಜಿ.ಟಿ ದೇವೇಗೌಡ, ಶಾಸಕ ರಾಮದಾಸ್, ಶಾಸಕ ನಾಗೇಂದ್ರ ಚೆಕ್ ನೀಡಿದರು.
ಬಳಿಕ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಬಹಳ ಮುಖ್ಯ. ಕೋವಿಡ್ 19 ರ ಪರಿಹಾರ ನಿಧಿಗೆ ಸಹಕಾರಿ ಸಂಸ್ಥೆಗಳ ವತಿಯಿಂದ 53 ಕೋಟಿ ದೇಣಿಗೆ ನೀಡಲಾಗಿದೆ. ರಾಜ್ಯದ ಸುಮಾರು 42,524 ಆಶಾ ಕಾರ್ಯಕರ್ತೆಯರಿಗೆ ತಲಾ 3000 ರೂ ಒಟ್ಟು ಗಳಂತೆ 12.75 ಕೋಟಿ ಪ್ರೋತ್ಸಾಹ ಧನ ಪಾವತಿಸಲಾಗಿದೆ. ಈ ಯೋಜನೆಯಡಿಯಲ್ಲಿ ವಿಶೇಷವಾಗಿ ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸುವುದು. ಹಾಗೂ ಈ ಯೋಜನೆಯಡಿ ರಾಜ್ಯದ 40,000 ರೈತರಿಗೆ 100 ಕೋಟಿ ಸಾಲ ಮಂಜೂರು ಮಾಡಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
Key words: covid 19 – Financial- Responsibility –Program-Minister- ST Somashekhar -distributed -checks -mysore