ಕ್ಯಾನ್ಸರ್ ಜತೆಗೆ ಕೋವಿಡ್ 19 ಗೂ ಮದ್ದು : ಚೀನಾ ವಿಜ್ಞಾನಿಗಳ ಜತೆ ನಿರಂತರ ಸಂಪರ್ಕದಲ್ಲಿ ಮೈಸೂರು ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ

 

ಮೈಸೂರು, ಮಾ.29, 2020 : (www.justkannada.in news ) ಮಹಾಮಾರಿ ಕೋವಿಡ್ 19 (ಕೊರೋನಾ ವೈರಸ್ ) ತಾತ್ಕಲಿಕ ಶಮನಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿರುವುದು ವೈರಸ್ ಭಾದಿತರಲ್ಲಿ ಕೊಂಚಮಟ್ಟಿನ ಆಶಾಭಾವನೆ ಮೂಡಿಸಿದೆ.

ಈ ಮಹಾಮಾರಿ ವೈರಸ್ ಗೆ ಮಲೇರಿಯಾ ರೋಗ ನಿಯಂತ್ರಣಕ್ಕೆ ಬಳಸುವ ಹೈಡ್ರಾಕ್ಸಿ ಕ್ಲೋರೋ ಕ್ವಿನ್ ( Hydroxychloroquine -HCQ) ಟ್ಯಾಬಲೆಟ್ ಬಳಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.

ವಿಶೇಷ ಅಂದ್ರೆ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಈ ಔಷಧ ಲಭಿಸುತ್ತದೆ. ಈ ಹಿನ್ನೆಲೆಯಲ್ಲಿ ಕೊರೋನಾಕ್ಕೆ ಔಷಧಿ ಕಂಡುಹಿಡಿಯೋ ತನಕ ಮಲೇರಿಯಾ ಔಷಧಿಯನ್ನೇ ಬಳಸಲು ಅಂತಾರಾಷ್ಟ್ರೀಯ ವೈದ್ಯ ಸಮೂಹ ಸಮ್ಮತಿಸಿದೆ.

covid.19-Hydroxychloroquine -HCQ-corona-mysore-k.s.rangappa-chemistry-scientist-WHO

ಕರೋನಾ ವೈರಾಣು ಪೀಡಿತರಿಗೆ ಉಸಿರಾಟ ನಿತ್ರಾಣಗೊಳ್ಳುತ್ತದೆ. ಈ ಸಮಯದಲ್ಲಿ ಮಲೆರಿಯಾ ರೋಗ ನಿಯಂತ್ರಿಸುವ ಔಷಧಿ ಹೈಡ್ರಾಕ್ಸಿ ಕ್ಲೋರೋ ಕ್ವಿನ್ ಬಳಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂಬುದು ಡಬ್ಲುಎಚ್ಒ ಅಭಿಮತವಾಗಿದೆ.

ಕಳೆದ ವಾರವೇ ಸಲಹೆ ನೀಡಿದ್ದ ಪ್ರೊ.ರಂಗಪ್ಪ :

ಕೋವಿಡ್ 19 ಗೆ ಮಲೇರಿಯಾ ರೋಗ ನಿಯಂತ್ರಣಕ್ಕೆ ಬಳಸುವ ಹೈಡ್ರಾಕ್ಸಿ ಕ್ಲೋರೋ ಕ್ವಿನ್ ( Hydroxychloroquine -HCQ) ಟ್ಯಾಬಲೆಟ್ ಬಳಸುವಂತೆ ಮೈಸೂರಿನ ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ಕೆಲ ದಿನಗಳ ಹಿಂದೆಯೇ ಸಲಹೆ ನೀಡಿದ್ದರು.


ಕೋವಿಡ್ 19 ಗೆ ಸಂಬಂಧಿಸಿದಂತೆ ಮಾಧ್ಯಮಗಳು ಪ್ರತಿಕ್ರಿಯೆ ಪಡೆಯಲು ಪ್ರೊ.ರಂಗಪ್ಪ ಅವರನ್ನು ಸಂಪರ್ಕಿಸಿದ್ದಾಗ ಈ ಅಂಶ ತಿಳಿಸಿದ್ದರು. ಪ್ರೊ.ರಂಗಪ್ಪ ಅವರ ಹೇಳಿಕೆ ವೈದ್ಯಕೀಯ ಕ್ಷೇತ್ರದಲ್ಲಿ ಗೊಂದಲಕ್ಕೆ ಎಡೆಮಾಡಿತ್ತು. ಆದರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆಯೇ ಹೈಡ್ರಾಕ್ಸಿ ಕ್ಲೋರೋ ಕ್ವಿನ್ ( HCQ) ಟ್ಯಾಬಲೆಟ್ ಬಳಸಲು ಅಧಿಕೃತ ಮುದ್ರೆ ಹಾಕಿರುವುದು ಈ ಗೊಂದಲಕ್ಕೆ ತೆರೆ ಎಳೆದಂತಾಗಿದೆ.
ಈ ಬಗ್ಗೆ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಪ್ರೊ.ಕೆ.ಎಸ್.ರಂಗಪ್ಪ ಹೇಳಿದಿಷ್ಟು..
ಮಲೇರಿಯಾ ರೋಗ ನಿಯಂತ್ರಣಕ್ಕೆ ಬಳಸುವ ಹೈಡ್ರಾಕ್ಸಿ ಕ್ಲೋರೋ ಕ್ವಿನ್ ಬಳಸುವುದು ಈಗಾಗಲೇ ವೈದ್ಯಕೀಯ ಕ್ಷೇತ್ರದಲ್ಲಿ ಚಾಲ್ತಿಯಲ್ಲಿತ್ತು. ಅದನ್ನೇ ನಾನು ಹೇಳಿದಿದ್ದು. ನಾನೇನು ಇದರಲ್ಲಿ ವೀಶೇಷವಾಗಿ ಸಂಶೋಧನೆ ನಡೆಸಿ ಹೇಳಿದ್ದಲ್ಲ ಎಂದು ಸ್ಪಷ್ಟಪಡಿಸಿದರು.

ಚೀನಾ ಜತೆ ನಿರಂತರ ಸಂಪರ್ಕ :

ಮೈಸೂರು ವಿವಿ ವಿಶ್ರಾಂತ ಕುಲಪತಿಯಾಗಿರುವ ಪ್ರೊ.ಕೆ.ಎಸ್.ರಂಗಪ್ಪ ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಅಪರಿಮಿತ ಪರಿಣತಿ ಹೊಂದಿದ್ದಾರೆ. ಕ್ಯಾನ್ಸರ್ ಗೆ ಔಷಧಿ ಕಂಡು ಹಿಡಿಯುವ ನಿಟ್ಟಿನಲ್ಲಿ ಚೀನಾದ ಸಂಸ್ಥೆಗೆ ಕಳೆದ ಕೆಲ ವರ್ಷಗಳಿಂದಲೂ ಸಲಹೆಗಾರರಾಗಿ ನೇಮಕಗೊಂಡಿರುವ ಪ್ರೊ.ರಂಗಪ್ಪ, ಈಗಲೂ ಚೀನಾದ ಸಂಶೋಧಕರ ತಂಡದ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ.

covid.19-Hydroxychloroquine -HCQ-corona-mysore-k.s.rangappa-chemistry-scientist-WHO

ಕ್ಯಾನ್ಸರ್ ಮಾತ್ರವಲ್ಲದೆ ಇದೀಗ ಜಗತ್ತನೇ ತಲ್ಲಣಿಸುವಂತೆ ಮಾಡಿರುವ ಕೋವಿಡ್ 19 ಗೆ ಸಂಬಂಧಿಸಿದಂತೆಯೂ ಚೀನಾದ ವಿಜ್ಞಾನಿಗಳ ತಂಡದ ಜತೆ ಪ್ರೊ.ರಂಗಪ್ಪ ನಿರಂತರ ಸಂಪರ್ಕದಲ್ಲಿದ್ದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ. ಕೊರೋನಾ ನಿಯಂತ್ರಣಕ್ಕೂ ಸಂಬಂಧಿಸಿದಂತೆ ಒಂದು ಸುತ್ತಿನ ಪ್ರಯೋಗ ನಡೆಸಿದ್ದು ಅದರ ವರದಿಯನ್ನು ಚೀನಾಗೆ ನೀಡಲಾಗಿದೆ. ಸದ್ಯದಲ್ಲೇ ಮತ್ತೊಂದು ಸುತ್ತಿನ ಚರ್ಚೆಯನ್ನು ವಿಡಿಯೋ ಸಂವಾದದ ಮೂಲಕ ನಡೆಸಲಾಗುತ್ತದೆ ಎಂದು ಪ್ರೊ.ರಂಗಪ್ಪ ತಿಳಿಸಿದರು.

key words : covid.19-Hydroxychloroquine -HCQ-corona-mysore-k.s.rangappa-chemistry-scientist-WHO